ADVERTISEMENT

ಕೊರೊನಾ ವಿರುದ್ಧ ಸಮರ: ಅಧ್ಯಾಪ‍ಕರಿಂದ ₹ 7 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 20:00 IST
Last Updated 28 ಮಾರ್ಚ್ 2020, 20:00 IST

ಬೆಂಗಳೂರು: ಕೊರೊನಾದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಅಗತ್ಯದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸುಮಾರು 7 ಸಾವಿರ ಅಧ್ಯಾಪಕರು ತಮ್ಮ ಒಂದು ದಿನದ ವೇತನದ ಮೊತ್ತ ₹ 7 ಕೋಟಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳ ವೇತನದಿಂದ ಈ ಮೊತ್ತವನ್ನು ಪಡೆದುಕೊಳ್ಳುವಂತೆ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

ವೇತನ ಹಿಂಬಾಕಿ: 2016ರ ಜನವರಿ 1ರಿಂದ 2019ರ ಮಾರ್ಚ್‌ 31ರವರೆಗೆ ಯುಜಿಸಿ 7ನೇ ವೇತನ ಹಿಂಬಾಕಿ ಪಾವತಿಗಾಗಿ ಸರ್ಕಾರ ಬಿಡುಗಡೆ ಮಾಡಿದ್ದ ಮೊತ್ತವನ್ನು ಕೊರೊನಾ ಭೀತಿಯಿಂದಾಗಿ ಇದೇ 31ರೊಳಗೆ ಬಳಸಲು ಸಾಧ್ಯವಾಗುತ್ತಿಲ್ಲ. ಮೇ 31ರವರೆಗೂ ಕಾಲೇಜು ಶಿಕ್ಷಣ ಆಯುಕ್ತರ ಪಿ.ಡಿ ಖಾತೆಯಲ್ಲಿ ಇರಿಸಲು ಹಣಕಾಸು ಇಲಾಖೆ ಅನುಮತಿ ನೀಡಿದೆ.

ADVERTISEMENT

ಕೊರೊನಾ ಭೀತಿ ನಿವಾರಣೆಯಾದ ಬಳಿಕ ಅಧ್ಯಾಪಕರಿಗೆ ಈ ಹಿಂಬಾಕಿ ದೊರಕಲಿದೆ. ಆದೇಶ ಬರುವವರೆಗೂ ಹಿಂಬಾಕಿಗೆ ಸಂಬಂಧಿಸಿ ಬಿಲ್‌ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.