ADVERTISEMENT

ಕಾಲೇಜು ಆಯ್ಕೆ ಗೊಂದಲ ಬೇಡ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:00 IST
Last Updated 12 ಮೇ 2019, 20:00 IST
   

ಪಿಯು ಮತ್ತು +2 ತರಗತಿಗೆ ಯಾವ ಕಾಲೇಜು ಸೇರಿದರೆ ಉತ್ತಮ ಎನ್ನುವುದು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡುವ ಪ್ರಶ್ನೆ.ಎಸ್‌ಎಸ್‌ಎಲ್‌ಸಿ, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಫಲಿತಾಂಶ ಪ್ರಕಟವಾದಂದಿನಿಂದ ಈ ಪ್ರಶ್ನೆ ಗೊಂದಲ ಮೂಡಿಸುವುದೇ ಹೆಚ್ಚು.

ವಿದ್ಯಾರ್ಥಿಗಳು ಆಯ್ಕೆ ಮಾಡುವ ಕಾಲೇಜುಗಳು ಅವರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಕಾರಣದಿಂದ ನಗರದ ಎಲ್ಲ ಕಾಲೇಜುಗಳ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಕರ ದೊಡ್ಡ ಗುಂಪುಗಳು ಈಗ ಕಾಣುತ್ತಿವೆ. ಕೆಲವು ಕಾಲೇಜುಗಳಲ್ಲಿ ಪಿಯು ಪ್ರಥಮ ವರ್ಷದ ಪ್ರವೇಶಕ್ಕಾಗಿ ಈಗಾಗಲೇ ಮೊದಲ ಪಟ್ಟಿ ಬಿಡುಗಡೆಯಾಗಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರವೇಶಕ್ಕೆ ಸಮಬಲದ ಪೈಪೋಟಿ ಕಂಡು ಬರುತ್ತಿದೆ. ಶೇಕಡಾ 90ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳು ಕೂಡ ವಾಣಿಜ್ಯ ವಿಭಾಗ ಸೇರುತ್ತಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಾಣಿಜ್ಯ ವಿಭಾಗದ ಕಟ್‌ ಆಫ್‌ ಮಾರ್ಕ್ಸ್‌ ಶೇ 3.9ರಷ್ಟು ಮತ್ತು ವಿಜ್ಞಾನ ವಿಭಾಗದ ಕಟ್‌ ಆಫ್‌ ಮಾರ್ಕ್ಸ್‌ ಶೇ 3.7ರಷ್ಟು ಏರಿಕೆಯಾಗಿದೆ. ಇಲ್ಲಿವೆ ಕೆಲವು ಕಾಲೇಜುಗಳ ಪ್ರವೇಶಾತಿ ಸ್ಥಿತಿಗತಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.