ADVERTISEMENT

ಛಲವಾದಿ, ರವಿಕುಮಾರ್‌ ವಿರುದ್ಧ ಸಭಾಪತಿಗೆ ದೂರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 16:30 IST
Last Updated 2 ಜೂನ್ 2025, 16:30 IST
ಛಲವಾದಿ ನಾರಾಯಣಸ್ವಾಮಿ,  ಎನ್‌. ರವಿ ಕುಮಾರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ‍ಪರಿಷತ್‌ನ ಕಾಂಗ್ರೆಸ್‌ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. 
ಛಲವಾದಿ ನಾರಾಯಣಸ್ವಾಮಿ,  ಎನ್‌. ರವಿ ಕುಮಾರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ‍ಪರಿಷತ್‌ನ ಕಾಂಗ್ರೆಸ್‌ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.    

ಬೆಂಗಳೂರು: ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಸಚೇತಕ ಎನ್‌. ರವಿ ಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ‍ಪರಿಷತ್‌ನ ಕಾಂಗ್ರೆಸ್‌ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. 

ಸಂಪುಟ ದರ್ಜೆಯ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ, ಇಂತಹ ಅಸಂಸದೀಯ ವರ್ತನೆಗೆ ಕ್ಷಮೆಯಾಚಿಸುವ ಬದಲು ಸಾರ್ವಜನಿಕ ವೇದಿಕೆಗಳಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವರ ಹೇಳಿಕೆಗಳು ನೇರವಾಗಿ ಪ್ರಿಯಾಂಕ್‌ ಖರ್ಗೆ ಅವರನ್ನು ಗುರಿಯಾಗಿಸಿದ್ದರೆ, ಪರೋಕ್ಷವಾಗಿ ಕರ್ನಾಟಕದ ದಲಿತ ಸಮುದಾಯವನ್ನು ಅವಮಾನಿಸುವ ದುರುದ್ದೇಶ ಹೊಂದಿವೆ. ಆ ಮೂಲಕ ನಾರಾಯಣಸ್ವಾಮಿ ತಮ್ಮ ಪ್ರಮಾಣವಚನವನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಎನ್‌. ರವಿಕುಮಾರ್‌ ಅವರು ‘ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸ್ವಾತಂತ್ರ್ಯ ಕಳೆದುಕೊಂಡಿದೆ. ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದಿದ್ದಾರೆಯೇ’ ಎಂದು ಪ್ರಶ್ನಿಸುವ ಮೂಲಕ ಅವರನ್ನು ಧರ್ಮದ ಆಧಾರದಲ್ಲಿ ನಿಂದಿಸಿದ್ದಾರೆ. ದೇಶದ ಆಡಳಿತ ಸೇವೆಯ ಸಮಗ್ರತೆಯನ್ನು ರಕ್ಷಿಸಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌, ಸದಸ್ಯರಾದ ವಸಂತಕುಮಾರ್, ಪುಟ್ಟಣ್ಣ, ದಿನೇಶ್‌ ಗೂಳಿಗೌಡ, ರವಿ, ಡಿ.ಟಿ. ಶ್ರೀನಿವಾಸ್‌, ಬಸವನಗೌಡ ಬಾದರ್ಲಿ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.