ADVERTISEMENT

ಬಿಜೆಪಿಗೆ ಬರೀ ಲೂಟಿ ಹೊಡೆಯುವುದೇ ಕೆಲಸ : ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 11:32 IST
Last Updated 3 ಫೆಬ್ರುವರಿ 2023, 11:32 IST
   

ಬೀದರ್: ‘ಬಿಜೆಪಿ ಸರ್ಕಾರ ಹೆಸರು ಬದಲಾವಣೆ ಬಿಟ್ಟರೆ ಏನೂ ಮಾಡಿಲ್ಲ. ಬಿಜೆಪಿಗೆ ಲೂಟಿ ಹೊಡೆಯುವುದು ಬಿಟ್ಟರೆ ಬೇರೆ ಕೆಲಸವಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಬಿಜೆಪಿ ಸರ್ಕಾರ ಜನರ ರಕ್ತ ಹೀರಲು ಶುರು ಮಾಡಿದೆ. ಕಮಿಷನ್‌ ಕೊಡಲು ಸಾಧ್ಯವಾಗದೇ ಬೆಳಗಾವಿ, ಬೆಂಗಳೂರು, ತಮಕೂರಿನ ಗುತ್ತಿಗೆದಾರರು ಮೃತಪಟ್ಟರು. ಒಬ್ಬರು ದಯಾ ಮರಣ ಕೋರಿದರು. ಗುತ್ತಿಗೆದಾರರ ಸಂಘದವರು ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದರು. ಲಂಚ ಕೊಡದೆ ಯಾವ ಕೆಲಸವೂ ಆಗುತ್ತಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

‘ಲೋಕೋಪಯೋಗಿ, ಬಿಬಿಎಂಪಿ ಸೇರಿದಂತೆ ಸರ್ಕಾರದ ಎಲ್ಲ ಕಚೇರಿಗಳಲ್ಲೂ ಲಂಚದ ವ್ಯವಹಾರ ನಡೆಯುತ್ತಿದೆ. ವರ್ಗಾವಣೆ, ಬಡತಿ, ನೇಮಕಾತಿಗೂ ಲಂಚ ಕೇಳುತ್ತಿದ್ದಾರೆ. ಪೊಲೀಸ್‌ ಅಧಿಕಾರಿಯೇ ಜೈಲಿಗೆ ಹೋಗಿರುವುದು ಎಲ್ಲರಿಗೂ ತಿಳಿಸಿದೆ. ಬಿಜೆಪಿ ಸರ್ಕಾರ, ಅಲಿಬಾಬಾ ಹಾಗೂ 40 ಜನರ ಕಳ್ಳರ ಕೂಟದಂತೆ ಆಗಿದೆ‘ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.