ADVERTISEMENT

ಶಾಸಕ ವಿನಯ ಕುಲಕರ್ಣಿ ಬಳಸುತ್ತಿದ್ದ ಕಾರು ಜಪ್ತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:17 IST
Last Updated 11 ಜನವರಿ 2025, 14:17 IST
<div class="paragraphs"><p>ವಿನಯ ಕುಲಕರ್ಣಿ</p></div>

ವಿನಯ ಕುಲಕರ್ಣಿ

   

ಬೆಂಗಳೂರು: ಹಲವರಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿದ್ದ ಆರೋಪವುಳ್ಳ ಐಶ್ವರ್ಯಾಗೌಡ–ಹರೀಶ್ ದಂಪತಿ ಹೆಸರಿನಲ್ಲಿದ್ದ ಮತ್ತೊಂದು ವಿಲಾಸಿ ಐಷಾರಾಮಿ ಕಾರನ್ನು ರಾಜರಾಜೇಶ್ವರಿನಗರ ಠಾಣೆಯ ಪೊಲೀಸರು ಜಪ್ತಿ ಮಾಡಿದ್ದಾರೆ.

ಜ.2ರಂದು ಆರೋಪಿಗಳಿಂದ ಔಡಿ, ಬಿಎಂಡಬ್ಲ್ಯು, ಫಾರ್ಚೂನರ್‌ ಕಾರು ಜಪ್ತಿ ಮಾಡಿದ್ದು, ಈಗ ಮತ್ತೊಂದು ಕಾರು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ವಂಚನೆ ಹಣದಿಂದ ಕಾರು ಖರೀದಿಸಲಾಗಿತ್ತು. ಕಾರನ್ನು ವಿನಯ ಕುಲಕರ್ಣಿ ಅವರಿಗೆ ಉಡುಗೊರೆ ನೀಡಿದ್ದರು ಎಂಬ ಆರೋಪವಿದೆ. ಈ ಸಂಬಂಧ ಕೆಲವು ದಾಖಲೆಗಳು ಲಭಿಸಿದ್ದವು. ಅದನ್ನು ಆಧರಿಸಿ ಕಾರನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

ವಂಚನೆ ಸಂಬಂಧ ಐಶ್ವರ್ಯಾಗೌಡ ದಂಪತಿ ವಿರುದ್ಧ ಚಂದ್ರಾಲೇಔಟ್‌ ಠಾಣೆಯಲ್ಲಿ ಒಂದು ಹಾಗೂ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದವು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.