ADVERTISEMENT

ಕಾಂಗ್ರೆಸ್ ಪಾಕಿಸ್ತಾನದ ಪಕ್ಷವಾಗಲಿ: ಬಿಜೆಪಿ ಮುಖಂಡ ಎನ್. ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 12:03 IST
Last Updated 20 ಜನವರಿ 2020, 12:03 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಚಿತ್ರದುರ್ಗ: ‘ದೇಶದ ಕುರಿತು ಕಾಂಗ್ರೆಸ್‌ ಮುಖಂಡರಿಗೆ ರಾಷ್ಟ್ರಾಭಿಮಾನವಾಗಲಿ, ಬೇರೆ ದೇಶಗಳಲ್ಲಿ ಇರುವಂಥ ನಮ್ಮ ಜನರ ಕುರಿತು ಅನುಕಂಪವಾಗಲಿ ಇಲ್ಲ. ರಾಷ್ಟ್ರೀಯ ಪಕ್ಷವಾಗಿರುವುದೇ ವ್ಯರ್ಥ. ಕೂಡಲೇ ಪಾಕಿಸ್ತಾನದ ಪಕ್ಷವಾಗುವುದೇ ಉತ್ತಮ’ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದರು.

‘ದೇಶದಲ್ಲಿ ತ್ರಿವಳಿ ತಲಾಕ್‌ನಿಂದ ಎನ್‌ಆರ್‌ಸಿವರೆಗೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ದೇಶದ ಕಾಂಗ್ರೆಸ್‌ ಮುಖಂಡರ ಹೇಳಿಕೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಿಕಟ ಸಂಪರ್ಕ ಹೊಂದಿದ್ದು, ಅವರೊಂದಿಗೆಯೇ ಕೈಜೋಡಿಸಲಿ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿ ಇರುವಂಥ ಭಾರತೀಯ ಮೂಲದ ಅಲ್ಪಸಂಖ್ಯಾತರು ಅಲ್ಲಿ ಹಿಂಸೆ ತಾಳಲಾರದೇ ಇಲ್ಲಿಗೆ ಬಂದು ಶರಣಾರ್ಥಿಯಾದರೆ, ಅವರೆಲ್ಲರಿಗೂ ಪೌರತ್ವ ನೀಡಲಿಕ್ಕಾಗಿ ಕೇಂದ್ರ ತಿದ್ದುಪಡಿ ಮಾಡಿದೆ. ಇದರ ವಿರುದ್ಧ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಮಾನವತಾವಾದದ ಕುರಿತು ಮಾತನಾಡುವ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಕೂಡ ಮಾನವೀಯತೆಯ ಶತ್ರುಗಳಾಗಿದ್ದು, ಅಮಾನವೀಯವಾಗಿ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.