ADVERTISEMENT

ದಲಿತರು, ಲಿಂಗಾಯತರೆಂದರೆ ಬಿಜೆಪಿಗೆ ತಾತ್ಸಾರವೇಕೆ: ಕಾಂಗ್ರೆಸ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2023, 5:01 IST
Last Updated 5 ಆಗಸ್ಟ್ 2023, 5:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದಲಿತರು, ಲಿಂಗಾಯತರೆಂದರೆ ಬಿಜೆಪಿಗೆ ತಾತ್ಸಾರವೇಕೆ ಎಂದು ಬಿಜೆಪಿಯನ್ನು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗೆಗಿನ ಅವಹೇಳನಕಾರಿ ಹೇಳಿಕೆ ಬಗ್ಗೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ನೀಡಿದ ಸಮರ್ಥನೆಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಕಾಂಗ್ರೆಸ್‌ ಬರೆದುಕೊಂಡಿದೆ.

‘ನಾನು ಖಂಡ್ರೆ ಎಂದು ಹೇಳುವ ಬದಲು ಖರ್ಗೆ ಎಂದು ಹೇಳಿದ್ದೇನೆ’ ಎಂದು ತಮ್ಮ ಹೇಳಿಕೆ ಬಗ್ಗೆ ಜ್ಞಾನೇಂದ್ರ ಅವರು ಸಮರ್ಥನೆ ನೀಡಿದರು.

ADVERTISEMENT

‘ಹಾ ಎಂತಹ ಸಮರ್ಥನೆ. ಖಂಡ್ರೆಯವರ ಬದಲು ಖರ್ಗೆ ಎಂದಿದ್ದೇನೆ ಎಂದು ಸಮರ್ಥಿಸಿಕೊಂಡಿರುವ ಆರಗ ಜ್ಞಾನೇಂದ್ರ ಅವರು ಖಂಡ್ರೆಯವರ ಮೈಬಣ್ಣದ ಬಗ್ಗೆ ಮುಲಾಜಿಲ್ಲದೆ ಅವಮಾನಿಸಬಹುದು ಎಂಬುದನ್ನು ಹೇಳುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದೆ.

‘ಸ್ವಪಕ್ಷದ ಲಿಂಗಾಯತರನ್ನು ತುಳಿದಿದ್ದಾಯ್ತು, ಈಗ ಇತರ ಪಕ್ಷದ ಲಿಂಗಾಯತ ನಾಯಕರನ್ನು ಅವಮಾನಿಸಲು ಮುಂದಾಗಿದೆಯೇ ಬಿಜೆಪಿ’ ಎಂದು ಸವಾಲೆಸೆದಿದೆ.

‘ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಈಶ್ವರ ಖಂಡ್ರೆ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಲು ಬಿಜೆಪಿಗರಿಗೆ ಯಾವ ನೈತಿಕತೆ ಇದೆ? ದಲಿತರು, ಲಿಂಗಾಯತರೆಂದರೆ ಬಿಜೆಪಿಗೆ ಇಷ್ಟೊಂದು ತಾತ್ಸಾರವೇಕೆ?’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.