ADVERTISEMENT

ಕಾರಜೋಳ, ಜಿಗಜಿಣಗಿ ಸಿಎಂ ಹುದ್ದೆಗೆ ಪರಿಗಣಿಸಿ: ಡಾ.ಡಿ.ಜಿ.ಸಾಗರ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:29 IST
Last Updated 22 ಜುಲೈ 2021, 13:29 IST
ಡಿ.ಜಿ.ಸಾಗರ್‌
ಡಿ.ಜಿ.ಸಾಗರ್‌   

ವಿಜಯಪುರ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರು ಸಮರ್ಥರಿದ್ದು, ಇವರಲ್ಲಿ ಯಾರನ್ನಾದರೂ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಪರಿಗಣಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್‌ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪ‍ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ಪೃಶ್ಯರು ಮುಖ್ಯಮಂತ್ರಿಯಾಗುವ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಎಲ್ಲ ಪಕ್ಷಗಳೂ ವಂಚಿಸುತ್ತಾ ಬಂದಿವೆ. ಇದರಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಎಂದು ಆರೋಪಿಸಿದರು.

ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ, ಬಸವಣ್ಣನವರ ವಿಚಾರಧಾರೆಯನ್ನು ಪ್ರಚಾರ ಮಾಡಬೇಕಾಗಿದ್ದ ಮಠಾಧೀಶರು ರಾಜಕಾರಣಕ್ಕೆ ಇಳಿಯುವ ಮೂಲಕ ಕೆಟ್ಟ ಸಂಪ್ರದಾಯ ಬೆಳೆಸುತ್ತಿದ್ದಾರೆ. ಇವರು ಮಾಡಬೇಕಾದ ಕೆಲಸ ಇದಲ್ಲ. ಜಾತಿ, ಜನಾಂಗದವರಿಗೆ ಅಧಿಕಾರ ಕೊಡಿಸುವುದು ಇವರ ಕೆಲಸವಲ್ಲ. ತಮ್ಮ ಗೌರವವನ್ನು ಕಳೆದುಕೊಳ್ಳುವ ಕೆಲಸ ಮಾಡಬಾರದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.