ADVERTISEMENT

ನನ್ನ ಗೌರವಕ್ಕೆ ಧಕ್ಕೆ ತರಲು ಪಿತೂರಿ: ಸುನಂದಾ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 20:06 IST
Last Updated 12 ಫೆಬ್ರುವರಿ 2021, 20:06 IST
ಸುನಂದಾ
ಸುನಂದಾ   

ಬೆಂಗಳೂರು: ‘ನನ್ನ ಹೆಸರು ಹಾಗೂ ಗೌರವಕ್ಕೆ ಧಕ್ಕೆ ತರಲು ಪೊಲೀಸರು ಪಿತೂರಿ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸುವಂತೆ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇನೆ’ ಎಂದು ‘ಇಂಡೇಲ್‌ ಮನಿ’ ಕಂಪನಿ ವ್ಯವಸ್ಥಾಪಕಿ ಆಗಿದ್ದ ಕೆ.ಓ. ಸುನಂದಾ ತಿಳಿಸಿದ್ದಾರೆ.

‘ಇಂಡೇಲ್ ಮನಿ ವ್ಯವಸ್ಥಾಪಕಿ ಪತ್ತೆಗೆ ವಾರೆಂಟ್’ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಸುನಂದಾ, ‘ನನ್ನ ಹಾಗೂ ಸಿಬ್ಬಂದಿ ವಿರುದ್ಧ ಬೇಗೂರು ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಎಲ್ಲ ಹಣವನ್ನು ಕಂಪನಿಗೆ ಈಗಾಗಲೇ ಪಾವತಿ ಮಾಡಲಾಗಿದೆ’ ಎಂದಿದ್ದಾರೆ.

‘ಪ್ರಕರಣದಲ್ಲಿ ಜಾಮೀನು ಪಡೆದು ಕೊಂಡಿದ್ದೆ. ಜಾಮೀನು ರದ್ದುಪಡಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.’ ‘ಅದಾದ ನಂತರ ಠಾಣೆಗೆ ಹೋಗಿ ವಿಚಾರಣೆ ಎದುರಿಸಿದೆ. ಬಳಿಕವೂ ನೋಟಿಸ್ ನೀಡಿದ್ದರು. ಉತ್ತರಿಸಲು ಫೆ. 19ರವರೆಗೆ ಕಾಲಾ
ವಕಾಶ ಇತ್ತು. ಅಷ್ಟರಲ್ಲೇ, ನಾನು ತಲೆಮರೆಸಿಕೊಂಡಿರುವುದಾಗಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕಾನ್‌ಸ್ಟೆಬಲೊಬ್ಬರು ನನ್ನ ಬಳಿ ಹಣಕ್ಕೂ ಬೇಡಿಕೆ ಇಡುತ್ತಿದ್ದಾರೆ’ ಎಂದೂ ಸುನಂದಾ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.