ADVERTISEMENT

ಗ್ರಾ.ಪಂ.ಗೊಂದು ಮಾದರಿ ಶಾಲೆ: ವಿಲೀನಕ್ಕೆ ಮುನ್ನುಡಿ- ಬಿ.ಸಿ.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 17:18 IST
Last Updated 19 ಜುಲೈ 2022, 17:18 IST
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪತ್ರಕರ್ತರ ಪ್ರೆಶ್ನೆಗಳಿಗೆ ಉತ್ತರಿಸಿದರು.
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪತ್ರಕರ್ತರ ಪ್ರೆಶ್ನೆಗಳಿಗೆ ಉತ್ತರಿಸಿದರು.   

ಬೆಂಗಳೂರು: ‘ಪಂಚಾಯಿತಿಗೆ ಒಂದರಂತೆ ರಾಜ್ಯದ 709 ಗ್ರಾಮ ಪಂಚಾಯಿತಿಗಳಲ್ಲಿ (ಏಕ ಹಳ್ಳಿ ಹೊಂದಿರುವ ಪಂಚಾಯಿತಿಗಳು) ಮಾದರಿ ಶಾಲೆ ತೆರೆಯಲಾಗುವುದು. ಅಗತ್ಯವಿದ್ದರೆ ಕಡಿಮೆ ಮಕ್ಕಳಿರುವ ಇತರೆ ಪ್ರಾಥಮಿಕ ಶಾಲೆಗಳನ್ನು ಮಾದರಿ ಶಾಲೆಗಳಲ್ಲಿ ವಿಲೀನಗೊಳಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡುತ್ತಾ, ‘ರಾಜ್ಯದ ಶಾಲೆಗಳಲ್ಲಿಶಿಕ್ಷಕ, ವಿದ್ಯಾರ್ಥಿಗಳ ಅನುಪಾತ 1:23 ಇದೆ. ನಗರ ಹಾಗೂ ನಗರದ ಸುತ್ತಲ ಗ್ರಾಮಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಹಲವು ಜಿಲ್ಲೆಗಳ ಗ್ರಾಮೀಣ ಶಾಲೆಗಳಲ್ಲಿ ಸಮಸ್ಯೆ ಹೆಚ್ಚಿದೆ. 10 ಮಕ್ಕಳ ಒಳಗಿರುವ 1,812 ಶಾಲೆಗಳಿಗೂ ತಲಾ ಒಬ್ಬರು ಶಿಕ್ಷಕರನ್ನು ನೀಡಿದ್ದು, 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 13 ಸಾವಿರ ಶಾಲೆಗಳಿಗೂ ಸೌಲಭ್ಯ ಒದಗಿಸಲಾಗಿದೆ’ ಎಂದು ಹೇಳಿದರು.

ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ಸರಿಯಾಗಿ ನಡೆಯದೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಈ ಕೊರತೆ ನೀಗಿಸಲು ಈಗಾಗಲೇ 15 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ADVERTISEMENT

7 ಸಾವಿರ ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಎರಡು ಜತೆ ಸಮವಸ್ತ್ರ ಶೀಘ್ರ ವಿತರಿಸಲಾಗುವುದು. ಶೂ ಖರೀದಿಗೆ ನಿಗದಿಪಡಿಸಿದ ಹಣ ಕಡಿಮೆಯಾಗಿಲ್ಲ. ಅದೇ ದರಕ್ಕೆ ಉತ್ತಮ ಗುಣಮಟ್ಟದ ಶೂ, ಚಪ್ಪಲಿ, ಸಾಕ್ಸ್‌ ನೀಡಲು ಹಲವು ಕಂಪನಿಗಳು ಮುಂದೆ ಬಂದಿವೆ ಎಂದು ಸಮರ್ಥಿಸಿಕೊಂಡರು.

ಕೆಲವು ಶಾಲೆಗಳ ಕಂದಾಯ ದಾಖಲೆಗಳು ಸಮರ್ಪಕವಾಗಿಲ್ಲ. ನವೆಂಬರ್ ಒಳಗೆ ಎಲ್ಲ ದಾಖಲೆಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಶಾಲಾ ಮಕ್ಕಳನ್ನು ಕಾಳಜಿಯಿಂದ ಕರೆದುಕೊಂಡು ಹೋಗಲು ಬಿಎಂಟಿಸಿ ಚಾಲಕರು, ನಿರ್ವಾಹಕರಿಗೆ
ಎಚ್ಚರಿಸಲಾಗುವುದು. ಶೈಕ್ಷಣಿಕ ದತ್ತು ಯೋಜನೆ ಸರಳೀಕರಣಗೊಳಿಸಲಾಗಿದ್ದು, ಹಲವು ದಾನಿಗಳು ಮುಂದೆ ಬಂದಿದ್ದಾರೆ ಎಂದು

‘ಸಮಿತಿ ವರದಿಗಳೇ ಅಂತಿಮವಲ್ಲ’

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ರಚಿಸಿದ ಸಮಿತಿಗಳು ನೀಡಿದ ವರದಿಗಳು (ಪೊಸಿಷನ್ ಪೇ‌ಪ‌ರ್‌ಗಳು) ಆಯಾ ವಿಷಯ ತಜ್ಞರ ಅಭಿಪ್ರಾಯಗಳಷ್ಟೆ.ಸಾರ್ವಜನಿಕರು ಓದಲು, ಅಭಿಪ್ರಾಯ ವ್ಯಕ್ತಪಡಿಸಲು ಆಗುವಂತೆ ಎಲ್ಲವನ್ನೂ ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದ ನಂತರ ಯಾವುದನ್ನು ಪರಿಗಣಿಸಬೇಕು. ಪರಿಗಣಿಸಬಾರದು ಎಂದುಡಿಎಸ್‌ಇಆರ್‌ಟಿ ನಿರ್ಧರಿಸಲಿದೆ ಎಂದು ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.