ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ದರ ಇಳಿಕೆ: ಸಚಿವ ಡಾ.ಸುಧಾಕರ್‌

ಕೋವಿಡ್‌ ನಿಯಂತ್ರಣಕ್ಕೆ ₹500 ಕೋಟಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 18:57 IST
Last Updated 21 ಜುಲೈ 2020, 18:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ದರವನ್ನು ಇಳಿಸಲಾಗಿದೆ. ಸರ್ಕಾರದ ಶಿಫಾರಸು ಪಡೆದ ರೋಗಿಗಳ ಪರೀಕ್ಷೆಗೆ ₹2 ಸಾವಿರ, ನೇರವಾಗಿ ಪರೀಕ್ಷೆ ಮಾಡಿಸುವವರಿಗೆ ₹3 ಸಾವಿರ ನಿಗದಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ತಿಳಿಸಿದರು.

ಸೋಮವಾರ ಅಪೂರ್ಣಗೊಂಡಿದ್ದ ಕಾರ್ಯಪಡೆ ಸಭೆ ಮಂಗಳವಾರ ನಡೆಯಿತು. ಬಳಿಕ ಮಾತನಾಡಿದ ಅವರು,ಕೋವಿಡ್‌ ನಿಯಂತ್ರಣದ ಉದ್ದೇಶಕ್ಕೆ ₹500 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳು ಕೋವಿಡ್‌ಗಾಗಿ ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಲೇಬೇಕು. ಉಳಿದ ಹಾಸಿಗೆಗಳನ್ನು ಅವರು ಬೇರೆ ಯಾವುದೇ ಕಾಯಿಲೆಗಳಿಗಾದರೂ ಬಳಸಿಕೊಳ್ಳಬಹುದು.ರಾಜ್ಯದ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 4,736 ಹಾಸಿಗೆಗಳಿಗೆ ಆಕ್ಸಿಜನ್‌ ಪೈಪ್‌ಲೈನ್‌ ಅಳವಡಿಕೆ ಮತ್ತು ಇತರೆ ಅಗತ್ಯ ಉಪಕರಣಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದರಿಂದ
ಸರ್ಕಾರಕ್ಕೆ ಹೆಚ್ಚುವರಿ ಹೈಫ್ಲೋ ಆಕ್ಸಿಜನ್‌ ಹಾಸಿಗೆಗಳು ಸಿಗಲಿವೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.