ADVERTISEMENT

ಕೋವಿಡ್‌ ನಿರ್ವಹಣೆ: 7 ಸಚಿವರ ಹೆಗಲಿಗೆ, ಐಎಎಸ್‌ ಅಧಿಕಾರಿಗಳಿಗೂ ಹೊಣೆ

ಎಂಟು ವಲಯವಾಗಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 1:28 IST
Last Updated 10 ಜುಲೈ 2020, 1:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಹರಡುತ್ತಿರುವುದನ್ನು ನಿಯಂತ್ರಿಸಲು ಬೆಂಗಳೂರನ್ನು ಎಂಟು ವಲಯಗಳಾಗಿ ವಿಂಗಡಿಸಿ ಅವುಗಳ ಉಸ್ತುವಾರಿಯನ್ನು ಏಳು ಸಚಿವರು ಹಾಗೂ ಒಬ್ಬರು ರಾಜಕೀಯ ಕಾರ್ಯದರ್ಶಿಗೆ ವಹಿಸಲಾಗಿದೆ.

ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಕೊರೊನಾ ಹಿಮ್ಮೆಟ್ಟಿಸಲು ಎಲ್ಲ ಸಚಿವರೂ ಗಂಭೀರವಾಗಿ ಕಾರ್ಯನಿರ್ಹಿಸಬೇಕೆಂದು ಮುಖ್ಯಮಂತ್ರಿ ಸೂಚಿಸಿರುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಜಧಾನಿಯಲ್ಲಿ ಕೋವಿಡ್‌ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜತೆಗೆ ಐಎಎಸ್‌ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಕಂಟೈನ್‌‌ಮೆಂಟ್‌ ವಲಯಗಳು ಸೇರಿ ಎಲ್ಲೆಡೆ ಬಿಗಿ ಕ್ರಮ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಚಿಕಿತ್ಸೆಗೆ ರೋಗಿಗಳ ಪರದಾಟ ತಪ್ಪಿಸುವ ಹೊಣೆ ಈ ಉಸ್ತುವಾರಿಗಳದ್ದಾಗಿದೆ.

ADVERTISEMENT

ವಲಯಗಳ ಉಸ್ತುವಾರಿ: ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಟಿ.ಸೋಮಶೇಖರ್‌, ಆರ್.ಅಶೋಕ,ಎಸ್‌.ಸುರೇಶ್‌ ಕುಮಾರ್, ಬೈರತಿ ಬಸವರಾಜ್‌, ಕೆ.ಗೋಪಾಲಯ್ಯ, ವಿ.ಸೋಮಣ್ಣ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್.‌

ಐಎಎಸ್‌ ಅಧಿಕಾರಿಗಳು: ಬೆಂಗಳೂರು ಪೂರ್ವ– ತುಷಾರ್ ಗಿರಿನಾಥ್, ಪಶ್ಚಿಮ– ರಾಜೇಂದ್ರ ಕುಮಾರ್ ಕಟಾರಿಯಾ,
ಬೊಮ್ಮನಹಳ್ಳಿ– ಪಿ.ಮಣಿವಣ್ಣನ್‌,ಯಲಹಂಕ– ನವೀನ್‌ರಾಜ್‌ ಸಿಂಗ್,ದಕ್ಷಿಣ– ಮುನೀಶ್‌ ಮೌದ್ಗಿಲ್‌,ಮಹದೇವಪುರ– ಡಾ.ಎನ್‌.ಮಂಜುಳಾ, ದಾಸರಹಳ್ಳಿ–ಪಿ.ಸಿ.ಜಾಫರ್‌ ಮತ್ತು ಆರ್‌.ಆರ್.ನಗರ– ಆರ್.ವಿಶಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.