ADVERTISEMENT

Covid Karnataka Update: ಸೋಂಕಿತರ ಪ್ರಮಾಣದಲ್ಲಿ ಇಳಿಕೆ, 588 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 25 ಮೇ 2021, 15:22 IST
Last Updated 25 ಮೇ 2021, 15:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 22,758 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 588 ಮಂದಿ ಮೃತಪಟ್ಟಿದ್ದಾರೆ.

ಹೀಗಾಗಿ, ಕೋವಿಡ್ ಸೋಂಕಿತರ ಸಂಖ್ಯೆ 24,72,973ರಷ್ಟಾಗಿದ್ದು, ಕೋವಿಡ್‌ನಿಂದಸಾವಿಗೀಡಾದವರ ಒಟ್ಟು ಸಂಖ್ಯೆ 26,399ಕ್ಕೆ ಜಿಗಿದಿದೆ.

ಒಂದೇ ದಿನ 38,224 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದು, ರಾಜ್ಯದಲ್ಲಿ ಈಗ 4,24,381 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಕೋವಿಡ್ ದೃಢಪಡುತ್ತಿರುವ ಶೇಕಡಾವಾರು ಪ್ರಮಾಣ 21.13%ಕ್ಕೆ ಇಳಿದಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 6,243 ಪ್ರಕರಣಗಳು ದೃಢಪಟ್ಟಿದ್ದು, 350 ಮಂದಿ ಮೃತಪಟ್ಟಿದ್ದಾರೆ.

ಉಳಿದಂತೆ, ಜಿಲ್ಲಾವಾರು ಕೋವಿಡ್ ಅಂಕಿ ಅಂಶ ಇಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.