ADVERTISEMENT

ಕೋವಿಡ್: ರಾಜ್ಯದ 7 ಜನರಲ್ಲಿ ಎವೈ 4.2 ವೈರಾಣು ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 1:12 IST
Last Updated 27 ಅಕ್ಟೋಬರ್ 2021, 1:12 IST
ಸುಧಾಕರ್
ಸುಧಾಕರ್   

ಬೆಂಗಳೂರು: ಬ್ರಿಟನ್‌, ರಷ್ಯಾ, ಯುರೋಪ್‌ನ ಕೆಲವು ದೇಶಗಳಲ್ಲಿ ಪತ್ತೆಯಾಗಿರುವ ಕೋವಿಡ್‌ನ ಹೊಸ ತಳಿಯ ವೈರಾಣು ಎವೈ 4.2 ರಾಜ್ಯಕ್ಕೂ ಕಾಲಿಟ್ಟಿದ್ದು,ಬೆಂಗಳೂರಿನಲ್ಲಿ 3 ಸೇರಿ ರಾಜ್ಯದಲ್ಲಿ ಒಟ್ಟು ಏಳು ಪ್ರಕರಣಗಳು ದೃಢಪಟ್ಟಿವೆ.

ಕೆಲ ದಿನಗಳ ಹಿಂದೆ ಸೋಂಕಿತರ ಮಾದರಿಯನ್ನುಅನುಕ್ರಮಣಿಕೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲ ಸೋಂಕಿತರು ಗುಣಮುಖರಾಗಿದ್ದಾರೆ.ಈ ವಿಚಾರವಾಗಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಮತ್ತುಹಿರಿಯ ಅಧಿಕಾರಿಗಳ ಜತೆಗೆಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸಭೆ ನಡೆಸಿದರು.

‘ಬ್ರಿಟನ್‌ ಮತ್ತು ರಷ್ಯಾದಲ್ಲಿ ಪತ್ತೆಯಾಗಿರುವ ಹೊಸ ತಳಿಯ ಎವೈ 4.2 ವೈರಾಣು ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಕೋವಿಡ್‌ನ ಯಾವುದೇ ಹೊಸ ತಳಿ ಬಂದರೂ
ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ತಜ್ಞರು ಐಸಿಎಂಆರ್‌ ಅಭಿಪ್ರಾಯವನ್ನೂ ಕೇಳಲಾಗುವುದು ಎಂದೂ ಸುಧಾಕರ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.