ADVERTISEMENT

ಎಮ್ಮೆ, ಎತ್ತುಗಳ ಜವಾಬ್ದಾರಿ ಹೊತ್ತ ಗ್ರಾ.ಪಂ.ಸಿಬ್ಬಂದಿ!

ಲಕ್ಷ್ಮೇಶ್ವರ: ಒಂದೇ ಕುಟುಂಬದವರಿಗೆ ಸೋಂಕು: ದನ, ಕರು ನೋಡಿಕೊಳ್ಳಲೂ ಜನರಿಲ್ಲ!

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 22:52 IST
Last Updated 3 ಆಗಸ್ಟ್ 2020, 22:52 IST
ಜಾನುವಾರುಗಳು–ಸಾಂದರ್ಭಿಕ ಚಿತ್ರ
ಜಾನುವಾರುಗಳು–ಸಾಂದರ್ಭಿಕ ಚಿತ್ರ   

ಲಕ್ಷ್ಮೇಶ್ವರ (ಗದಗ ಜಿಲ್ಲೆ): ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಬೆನ್ನಲ್ಲೆ ಗ್ರಾಮೀಣ ಭಾಗದಲ್ಲಿ ಜನರಿಗೆ ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿವೆ.

ಇಲ್ಲಿಗೆ ಸಮೀಪದ ಪುಟಗಾಂವ್‍ಬಡ್ನಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಒಂದೇ ಕುಟುಂಬದ ಎಂಟು ಜನರಲ್ಲಿ ಸೋಂಕು ದೃಢಪಟ್ಟಿತ್ತು. ತಾಲ್ಲೂಕಾಡಳಿತ ಅವರನ್ನೆಲ್ಲ ಕೋವಿಡ್ ಆಸ್ಪತ್ರೆಗೆ ಸೇರಿಸಲು ಆದೇಶಿಸಿತ್ತು. ಆದರೆ, ಅವರ ಮನೆಯಲ್ಲಿ ನಾಲ್ಕೈದು ಎಮ್ಮೆ ಮತ್ತು ಎತ್ತುಗಳು ಇದ್ದವು. ಕುಟುಂಬದವರೆಲ್ಲ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ದನ–ಕರುಗಳು ಅನಾಥವಾಗುವ ಸಮಸ್ಯೆ ಎದುರಾಯಿತು.

ಆ ಕುಟುಂಬದವರು ಜಾನುವಾರುಗಳನ್ನು ಗ್ರಾಮ ಪಂಚಾಯಿತಿಗೆ ತಂದು, ‘ಆಸ್ಪತ್ರೆಯಿಂದ ಬರುವವರೆಗೆ ನೀವೇ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು ಎನ್ನಲಾಗಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಪಂಚಾಯಿತಿಯ ಮೂವರು ಮತ್ತು ಕಂದಾಯ ಇಲಾಖೆಯ ಒಬ್ಬ ಸಿಬ್ಬಂದಿ ದನಕರುಗಳಿಗೆ ಮೇವು ಹಾಕಿ, ನೀರು ಕುಡಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.