ಬೆಂಗಳೂರು: ಬಿಜೆಪಿ ಬ್ಯಾನರ್ ಮುಂದೆ ನಿಂತು ಸರ್ಕಾರದ ರೇಷನ್ ಕಿಟ್ ಹಂಚಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ವಿಚಾರವಾಗಿ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸರ್ಕಾರಿ ಲಸಿಕೆಯ ಬಾಟಲಿಗೆ ತಮ್ಮ ಫೋಟೋ ಅಂಟಿಸಿ ಹಣಕ್ಕೆ ಮಾರಿಕೊಂಡಿದ್ದ ತೇಜಸ್ವಿ ಸೂರ್ಯ ಅವರೀಗ ಬಿಜೆಪಿ ಬ್ಯಾನರ್ ಮುಂದೆ ನಿಂತು ರೇಷನ್ ಕಿಟ್‌ಗಳನ್ನು ಹಂಚಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ಅವರು ಕಾರ್ಮಿಕ ಇಲಾಖೆಯ ಕಿಟ್‌ಗಳಿಗೆ ತಮ್ಮ ಫೋಟೋ ಅಂಟಿಸಿ ಹಂಚಿದ್ದಾರೆ ಎಂದೂ ಕಾಂಗ್ರೆಸ್ ಆರೋಪಿಸಿದೆ.
ಅಧಿಕಾರ ದುರ್ಬಳಕೆಗೆ ಮಿತಿ ಬೇಡವೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷವು ರಾಜ್ಯ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.