ಬೆಂಗಳೂರು: ಭಾನುವಾರ ಸಂಜೆ 5ರಿಂದ ಸೋಮವಾರ ಸಂಜೆ 5ರವರೆಗೂ ರಾಜ್ಯದಲ್ಲಿ ಕೋವಿಡ್–19 ದೃಢಪಟ್ಟ 14ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 862ಕ್ಕೆ ಏರಿಕೆಯಾಗಿದೆ.
ಒಟ್ಟು ಪ್ರಕರಣಗಳ ಪೈಕಿ 426ಮಂದಿ ಗುಣಮುಖರಾಗಿದ್ದು, 31 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 404 ಕೊರೊನಾ ಬಾಧಿತರು ರಾಜ್ಯದ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈಗೆ ವಲಸೆ ಹೋಗಿ ಮರಳಿರುವ ಹಿನ್ನೆಲೆ ಹೊಂದಿರುವಮಂಡ್ಯ ಮತ್ತು ಹಾಸನದ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಟ್ರಕ್‌ನಲ್ಲಿ ಮಂಡ್ಯಕ್ಕೆ ಬಂದಿದ್ದ ನಾಲ್ವರಲ್ಲಿ ಇಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಮಹಿಳೆಯನ್ನು ಕೆ.ಆರ್.ಪೇಟೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬೆಂಗಳೂರು ನಗರದ ಒಬ್ಬರು ಹಾಗೂ ಆಂಧ್ರ ಪ್ರದೇಶ ಅನಂತಪುರ ಮೂಲದ ವ್ಯಕ್ತಿಗೆ ಸೋಂಕು ತಗುಲಿರುವುದು ಬೆಂಗಳೂರಿನಲ್ಲಿ ದೃಢಪಟ್ಟಿದೆ.
ದಾವಣಗೆರೆಯಲ್ಲಿ ಮೂವರಿಗೆ, ಬೀದರ್‌ನಲ್ಲಿ ಇಬ್ಬರಿಗೆ, ಬಾಗಲಕೋಟೆಯ ಬನಹಟ್ಟಿ ಹಾಗೂ ಬದಾಮಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಕಲಬುರ್ಗಿ, ಹಾವೇರಿಯ ಶಿಗ್ಗಾವಿ ಹಾಗೂ ವಿಜಯಪುರದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಒಟ್ಟು178ಸೋಂಕು ಪ್ರಕರಣಗಳು, ಬೆಳಗಾವಿಯಲ್ಲಿ 113, ಮೈಸೂರಿನಲ್ಲಿ 88, ಕಲಬುರ್ಗಿಯಲ್ಲಿ 72, ದಾವಣಗೆರೆಯಲ್ಲಿ 71 ಹಾಗೂ ಬಾಗಲಕೋಟೆಯಲ್ಲಿ 53, ವಿಜಯಪುರದಲ್ಲಿ 50ಪ್ರಕರಣಗಳುದಾಖಲಾಗಿವೆ. ಕೊಡಗಿನಲ್ಲಿ ಅತಿ ಕಡಿಮೆ ಒಂದು ಪ್ರಕರಣ ದಾಖಲಾಗಿದ್ದು. ಪ್ರಸ್ತುರ ಅಲ್ಲಿ ಯಾವುದೇ ಹೊಸ ಪ್ರಕರಣವಿಲ್ಲ. ಮಂಡ್ಯದಲ್ಲಿ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ದಾವಣಗೆರೆ: ಪ್ರಕರಣಗಳು 71ಕ್ಕೆ ಏರಿಕೆ
ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
33 ವರ್ಷದ ಯುವಕನಿಗೆ (ಪಿ.850) ಪಿ.662 ಮಹಿಳೆಯ ಸಂಪರ್ಕದಿಂದ ಬಂದಿದೆ. ಈ ಮಹಿಳೆ ಮೇ 5 ರಂದು ಮೃತಪಟ್ಟಿದ್ದರು.
30 ವರ್ಷದ ಮಹಿಳೆಗೆ (ಪಿ.851) ಪಿ.663ರ (51 ವರ್ಷದ ಪುರುಷ) ಸಂಪರ್ಕದಿಂದ ಬಂದಿದೆ. 56 ವರ್ಷದ ಮಹಿಳೆಗೆ (ಪಿ.882) 15 ವರ್ಷದ ಬಾಲಕಿಯ (ಪಿ.667) ಸಂಪರ್ಕದಿಂದ ಬಂದಿದೆ.
ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ 71ಕ್ಕೆ ಏರಿದೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.