ADVERTISEMENT

ಸಮಿತಿ ರದ್ದುಪಡಿಸಿ: ಸಿಎಂಗೆ ಡಿಕೆಶಿ ಪತ್ರ

​ಪ್ರಜಾವಾಣಿ ವಾರ್ತೆ
Published 31 ಮೇ 2022, 20:32 IST
Last Updated 31 ಮೇ 2022, 20:32 IST
   

ಬೆಂಗಳೂರು: ‘ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ತಕ್ಷಣ ರದ್ದುಪಡಿಸಬೇಕು. ಹೊಸ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಮತ್ತು ಹಳೆ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪತ್ರ ಬರೆದಿದ್ದಾರೆ.

ಸಮಿತಿಯು ಪ್ರಮುಖ ದಾರ್ಶನಿಕರು ಮತ್ತು ದೇಶಭಕ್ತರ ಕುರಿತ ಪಠ್ಯಗಳನ್ನು ಕೈಬಿಟ್ಟಿರುವ, ತಿರುಚಿರುವ, ರಾಜ್ಯದ ಸಾಹಿತಿಗಳ ಹಾಗೂ ನಮ್ಮ ಬಹುತ್ವದ ಸಂಸ್ಕೃತಿಗೆ ಪೂರಕವಾದ ಲೇಖನಗಳನ್ನು ಕೈಬಿಟ್ಟು, ಸಂಕುಚಿತ ವಾದವನ್ನು ಬೆಂಬಲಿಸುವ, ಮತೀಯವಾದವನ್ನು ಪ್ರಚೋದಿಸುವ ವ್ಯಕ್ತಿಗಳ ಲೇಖನಗಳನ್ನು ಸೇರಿಸಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಇದರಿಂದ ಚಿಂತಿತರಾಗಿದ್ದಾರೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT