ADVERTISEMENT

ರೈತರಿಂದ 150 ಟನ್‌ ತರಕಾರಿ ಖರೀದಿ

ರಾಮನಗರ ಕ್ಷೇತ್ರದ ಜನರಿಗೆ ಉಚಿತ ವಿತರಣೆಗೆ ಸಂಸದ ಡಿ.ಕೆ.ಸುರೇಶ್ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 19:20 IST
Last Updated 14 ಏಪ್ರಿಲ್ 2020, 19:20 IST
ಪಾಂಡವಪುರ ತಾಲ್ಲೂಕಿನ ಟಿ.ಎಸ್‌.ಛತ್ರ ಗ್ರಾಮದ ರೈತನ ಜಮೀನಿನಲ್ಲಿ ಸಂಸದ ಡಿ.ಕೆ.ಸುರೇಶ್ ಎಲೆಕೋಸು ಖರೀದಿಸಿದರು
ಪಾಂಡವಪುರ ತಾಲ್ಲೂಕಿನ ಟಿ.ಎಸ್‌.ಛತ್ರ ಗ್ರಾಮದ ರೈತನ ಜಮೀನಿನಲ್ಲಿ ಸಂಸದ ಡಿ.ಕೆ.ಸುರೇಶ್ ಎಲೆಕೋಸು ಖರೀದಿಸಿದರು   

ಪಾಂಡವಪುರ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತರಕಾರಿ ವಿತರಿಸುವುದಕ್ಕಾಗಿ, ಸಂಸದ ಡಿ.ಕೆ.ಸುರೇಶ್ ಅವರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರಿಂದ ಮಂಗಳವಾರ ತರಕಾರಿ ಖರೀದಿಸಿದರು.

ತಾಲ್ಲೂಕಿನ ಟಿ.ಎಸ್.ಛತ್ರ, ಅತ್ತಿಗಾನಹ‌ಳ್ಳಿ, ಹಳೇಬೀಡು, ಬೋಳೇನಹಳ್ಳಿ ಗ್ರಾಮಗಳ ರೈತರ ಜಮೀನಿಗೆ ತೆರಳಿದ ಅವರು, ಎಲೆಕೋಸು, ಟೊಮೆಟೊ, ಕಲ್ಲಂಗಡಿ, ಸಿಹಿ ಕುಂಬಳ ಸೇರಿದಂತೆ ವಿವಿಧ ಬಗೆಯ ಸುಮಾರು 150 ಟನ್‌ ತರಕಾರಿ ಖರೀದಿಸಿದರು.

‘ರೈತರಿಗೆ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆಯಾಗಿದೆ. ಜನರಿಗೆ ತರಕಾರಿ ಸಿಗುತ್ತಿಲ್ಲ. ಹೀಗಾಗಿ, ಡಿ.ಕೆ. ಚಾರಿಟಬಲ್‌ ಟ್ರಸ್ಟ್‌ ಮೂಲಕ ರಾಮನಗರ ಲೋಕಸಭಾ ಕ್ಷೇತ್ರದ ಜನರಿಗೆ ಉಚಿತವಾಗಿ ತರಕಾರಿ ವಿತರಿಸಲಾಗುವುದು. ಅದಕ್ಕಾಗಿ ನಾನೇ ಖುದ್ದಾಗಿ ಬಂದು ರೈತರಿಂದ ನೇರವಾಗಿ ಖರೀದಿಸುತ್ತಿದ್ದೇನೆ’ ಎಂದು ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.