ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 13:36 IST
Last Updated 28 ಜೂನ್ 2023, 13:36 IST
Bengaluru: KPCC President DK Shivakumar addresses during a press conference at KPCC office in Bengaluru on Sunday, March 26, 2023. (Photo:  Dhananjay Yadav/IANS)
Bengaluru: KPCC President DK Shivakumar addresses during a press conference at KPCC office in Bengaluru on Sunday, March 26, 2023. (Photo: Dhananjay Yadav/IANS)   

ನವದೆಹಲಿ: ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ ವರಿಷ್ಠರು ಹಾಗೂ ಕೇಂದ್ರದ ಸಚಿವರನ್ನು ಗುರುವಾರ ಹಾಗೂ ಶುಕ್ರವಾರ ದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. 

ವಿಧಾನ ಪರಿಷತ್‌ನ ಮೂರು ಸದಸ್ಯ ಸ್ಥಾನಗಳು ಖಾಲಿಯಾಗಿವೆ. ಈ ಸ್ಥಾನಗಳಿಗೆ ನಾಮನಿರ್ದೇಶನ ಮಾಡಬೇಕಿದೆ. ಈ ಸ್ಥಾನಗಳಿಗೆ ಕಾಂಗ್ರೆಸ್‌ ಮುಖಂಡರಾದ ಎಂ.ಆರ್.ಸೀತಾರಾಮ್‌, ಮನ್ಸೂರ್ ಅಲಿ ಖಾನ್‌ ಹಾಗೂ ಸುಧಾಮ್ ದಾಸ್ ಹೆಸರನ್ನು ಅಖೈರುಗೊಳಿಸಲಾಗಿದೆ. ಸುಧಾಮ್‌ ದಾಸ್‌ ನಾಮನಿರ್ದೇಶನಕ್ಕೆ ಕಾಂಗ್ರೆಸ್‌ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಮೂರು ಸ್ಥಾನಗಳ ನಾಮನಿರ್ದೇಶನದ ಕುರಿತು ವರಿಷ್ಠರ ಜತೆಗೆ ಶಿವಕುಮಾರ್‌ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT