ADVERTISEMENT

₹2000 ನೋಟುಗಳ ಕಣ್ಮರೆ: ಕಪ್ಪು ಹಣಕ್ಕೆ ಬಿಜೆಪಿಯಿಂದ ಸಹಕಾರ?- ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2022, 11:06 IST
Last Updated 28 ಮೇ 2022, 11:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಲಾವಣೆಯಲ್ಲಿರುವ ₹2000 ನೋಟುಗಳ ಸಂಖ್ಯೆ ಇಳಿಕೆಯ ಕುರಿತ ವರದಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ದೇಶದ ಅರ್ಥ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಿದ್ದ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿದ್ದ ಕಾರಣ 'ಕಪ್ಪು ಹಣ. ಅವೈಜ್ಞಾನಿಕವಾಗಿ ₹2000 ಮುಖಬೆಲೆಯ ನೋಟುಗಳನ್ನು ಹೊರತಂದು ಮಾಡಿದ ಸಾಧನೆ ಏನು? 'ಕಪ್ಪು ಹಣ' ಕೂಡಿಡುವವರಿಗೆ ಸಹಕಾರವೇ?’ ಎಂದು ಪ್ರಶ್ನಿಸಿದೆ.

‘ಗಣನೀಯ ಪ್ರಮಾಣದಲ್ಲಿ ₹2000 ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆ ಎಂದರೆ ಏನರ್ಥ?’ ಎಂದು ಕಾಂಗ್ರೆಸ್‌ ಕೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.