ADVERTISEMENT

ದೆಹಲಿಗೆ ಹೋದವರನ್ನು ರಾತ್ರಿಯೊಳಗೆ ಪತ್ತೆಹಚ್ಚಲು ಪ್ರಯತ್ನ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 8:19 IST
Last Updated 1 ಏಪ್ರಿಲ್ 2020, 8:19 IST
   

ಬೆಂಗಳೂರು:ರಾಜ್ಯದಿಂದ 342 ಮಂದಿ ದೆಹಲಿಯ ನಿಜಾಮುದ್ದೀನ್ ಸಭೆಗೆ ತೆರಳಿದ್ದಾರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ, ಇವರನ್ನು ರಾತ್ರಿಯೊಳಗೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದೊಂದು ದೊಡ್ಡ ಸವಾಲು, ಇದನ್ನು ಗೃಹ ಮತ್ತು ಆರೋಗ್ಯ ಇಲಾಖೆಗಳು ಸಮರ್ಥವಾಗಿ ನಿಭಾಯಿಸಲಿವೆ ಎಂದು ಅವರು ಬುಧವಾರ ಮಾಧ್ಯಮದವರಿಗೆ ತಿಳಿಸಿದರು.

ಮಾರ್ಚ್ ಮೊದಲ ವಾರ ಮತ್ತು ಮೂರನೇ ವಾರ ದೆಹಲಿಯಲ್ಲಿ ಸಭೆ ನಡೆದಿದೆ. ಈ ಸಭೆಗೆ ಹೋದವರು ಇದ್ದರೆ ತಕ್ಷಣ ಸಹಾಯವಾಣಿ ಸಂಪರ್ಕಿಸಬೇಕು, ದೆಹಲಿಗೆ ಹೋದವರ ಕುಟುಂಬದ ಸದಸ್ಯರು, ಅವರು ಸಂಪರ್ಕಿಸಿರಬಹುದಾದ ಇತರ ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸವನ್ನೂ ಸರ್ಕಾರ ಮಾಡುತ್ತದೆ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ದೆಹಲಿಗೆ ಹೋಗಿದ್ದವರ ಪೈಕಿ 200 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ನಲ್ಲಿ ಇಡಲಾಗಿದೆ, ರಾಜ್ಯದ 9 ಜಿಲ್ಲೆಯಷ್ಟೇ ಅಲ್ಲ, ಇತರ ಕೆಲವು ಜಿಲ್ಲೆಗಳಿಂದ ಸಹ ದೆಹಲಿಗೆ ಹೋಗಿರುವ ಶಂಕೆ ಇದೆ, ಹೀಗಾಗಿ ಇವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.