ADVERTISEMENT

ಟಿಸಿ ಬಿಲ್ ಪಾವತಿಸಲು ಲಂಚಕ್ಕೆ ಬೇಡಿಕೆ: ಹೆಸ್ಕಾಂ ಇಇ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 10:35 IST
Last Updated 29 ಏಪ್ರಿಲ್ 2020, 10:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗಲಕೋಟೆ: ಟ್ರಾನ್ಸ್‌‌ಫಾರ್ಮರ್ (ಟಿಸಿ) ಬಿಲ್ ಪೂರೈಕೆಗೆ ವಿದ್ಯುತ್ ಗುತ್ತಿಗೆದಾರರೊಬ್ಬರಿಂದ 10 ಸಾವಿರ ಲಂಚ ಪಡೆಯುತ್ತಿದ್ದ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಲ್ಲಿನ ನವನಗರ 6ನೇ ಸೆಕ್ಟರ್‌ನಲ್ಲಿ ಇರುವ ಹೆಸ್ಕಾಂ ವಲಯ ಕಚೇರಿ ಎಂಜಿನಿಯರ್ ಚಂದ್ರಶೇಖರ್ ಲೋಕಾಯುಕ್ತ ಬಲೆಗೆ ಬಿದ್ದವರು.

ಟ್ರಾನ್ಸ್‌‌ಫಾರ್ಮರ್ ಪೂರೈಕೆ ಮಾಡಿದ್ದ ಗುತ್ತಿಗೆದಾರ ಗುರುಬಸವ ಸಿಂಧೂರ ಅವರ ಆರು ಬಿಲ್‌ಗಳು ಬಾಕಿ ಉಳಿದಿದ್ದು, ಅವುಗಳನ್ನು ಪಾವತಿಸಲು ಚಂದ್ರಶೇಖರ ₹10 ಸಾವಿರ ಲಂಚ ಕೇಳಿದ್ದರು. ಆ ಬಗ್ಗೆ ಗುರುಬಸವ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ADVERTISEMENT

ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಗಣಪತಿ ಗಡಾಜೆ ಹಾಗೂ ಇನ್ಸ್‌ಪೆಕ್ಟರ್ ವಿಶ್ವನಾಥ ಚೌಗಲಾ ಅವರ ತಂಡ ಬುಧವಾರ ಹೆಸ್ಕಾಂ ಕಚೇರಿಯಲ್ಲಿ ಚಂದ್ರಶೇಖರ ಅವರು ಲಂಚ ಪಡೆಯುವಾಗ ದಾಳಿ ನಡೆಸಿ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.