ADVERTISEMENT

ರಾಣಿ ಮಲ್ಲಮ್ಮನ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 11:47 IST
Last Updated 7 ಸೆಪ್ಟೆಂಬರ್ 2020, 11:47 IST
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಬೆಳವಡಿ ರಾಣಿ ಮಲ್ಲಮ್ಮನ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಬೈಲಹೊಂಗಲ ತಾಲ್ಲೂಕು ಬೆಳವಡಿಯ ಅಭಿಮಾನಿ ಬಳಗದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಬೆಳವಡಿ ರಾಣಿ ಮಲ್ಲಮ್ಮನ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಬೈಲಹೊಂಗಲ ತಾಲ್ಲೂಕು ಬೆಳವಡಿಯ ಅಭಿಮಾನಿ ಬಳಗದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಮುಂದೆ ಬೆಳವಡಿ ರಾಣಿ ಮಲ್ಲಮ್ಮನ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಬೈಲಹೊಂಗಲ ತಾಲ್ಲೂಕು ಬೆಳವಡಿ ಗ್ರಾಮದ ‘ರಾಣಿ ಮಲ್ಲಮ್ಮ ಅಭಿಮಾನಿ ಬಳಗ’ದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ, ಮರಾಠಿ ಸೈನಿಕರೊಂದಿಗೆ ಯುದ್ಧ ಮಾಡಿ ಜಯ ಗಳಿಸಿದ ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಪ್ರಶಂಸೆಗೆ ಪಾತ್ರವಾಗಿದ್ದ ವೀರ ರಾಣಿ ಮಲ್ಲಮ್ಮ. 16ನೇ ಶತಮಾನದಲ್ಲಿ 1800 ಮಂದಿಯ ಮಹಿಳಾ ಸೈನ್ಯವನ್ನು ಕಟ್ಟಿದ್ದರು. ಅವರ ಇತಿಹಾಸವನ್ನು ತಿಳಿಸುವುದಕ್ಕೋಸ್ಕರ ಸರ್ಕಾರವು ಫೆ. 28 ಹಾಗೂ ಮಾರ್ಚ್‌ 1ರಂದು ಬೆಳವಡಿಯಲ್ಲಿ ಮಲ್ಲಮ್ಮನ ಉತ್ಸವವನ್ನು ನಡೆಸುತ್ತಿದೆ. ಇದೆಲ್ಲವನ್ನೂ ಪರಿಗಣಿಸಿ, ಶೌರ್ಯದ ಪ್ರತೀಕವಾದ ಅವರ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಿ, ಇಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಗ್ರಾಮದ ಹಿರಿಯರಾದ ಡಾ.ಆರ್.ಬಿ. ಪಾಟೀಲ, ಸಿ.ಎಸ್. ಚಿಕ್ಕನಗೌಡರ, ಈರಣ್ಣ ಕರೀಕಟ್ಟಿ, ಪ್ರಕಾಶ ಹುಂಬಿ, ಬಸವರಾಜ ಬಳಿಗಾರ, ಗಿರಿಮಲ್ಲಯ್ಯಹೊಸಮಠ, ಶಂಕ್ರಪ್ಪ ಬೇವಿನಕೊಪ್ಪ, ಅರ್ಜುನ ಕೆಂಪಣ್ಣವರ, ನಿಂಗಪ್ಪ ತುರಾಯಿ, ಸಂಗಯ್ಯ ಹಿರೇಮಠ, ದುಂಡಪ್ಪ ಗೋದಳ್ಳಿ, ಶಂಕರ ಪರಮಾನಾಯಕ ಹಾಗೂ ಬೆಳವಡಿ ಮಲ್ಲಮ್ಮನ ಕುರಿತು ಕೃತಿ ರಚಿಸಿರುವ ಯ.ರು. ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.