ADVERTISEMENT

ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಯನ್ನು ಅವಹೇಳನ ಮಾಡಿದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 10:31 IST
Last Updated 5 ಆಗಸ್ಟ್ 2018, 10:31 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಕರ್ನಾಟಕ ಪೊಲೀಸರು (ಅಪರಾಧ ಪತ್ತೆದಳ) ಶುಕ್ರವಾರ ಬಂಧಿಸಿದ್ದಾರೆ.ಬಂಧಿತ ವ್ಯಕ್ತಿ 24ರ ಹರೆಯದ ಪ್ರಶಾಂತ್ ಪೂಜಾರಿ.ಈತ ಮಂಗಳೂರು ನಿವಾಸಿ. ಈತನ ವಿರುದ್ಧ ಐಪಿಸಿ ಸೆಕ್ಷನ್‌ 153, 504 ಹಾಗೂ ಐಟಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಕುಡ್ಲ ಟ್ರೋಲ್ಸ್ ಎಂಬ ಫೇಸ್‌‍ಬುಕ್ ಪೇಜ್‍ನಲ್ಲಿ ಕುಮಾರಸ್ವಾಮಿಯನ್ನು ಅವಹೇಳನ ಮಾಡಿ ಪೋಸ್ಟ್ ಹಾಕಲಾಗಿತ್ತು. ಪ್ರಶಾಂತ್ ಪೂಜಾರಿ ಕುಡ್ಲ ಟ್ರೋಲ್ಸ್ ಪೇಜ್‍ನ ಅಡ್ಮಿನ್ ಆಗಿದ್ದಾರೆ.ಕುಮಾರಸ್ವಾಮಿಯವರ ಫೋಟೊವೊಂದನ್ನು ತೋರಿಸಿ ಮಹಿಳೆಯೊಬ್ಬರು ಇದು ಯಾರು? ಎಂದು ಕೇಳುವ ಚಿತ್ರ, ಅದರ ಅಡಿಯಲ್ಲಿ ಇಂಗ್ಲಿಷ್‍ನಲ್ಲಿ ಬೈಗುಳವಿರುವ ಪೋಸ್ಟ್ ಅದಾಗಿತ್ತು.

ಮುಖ್ಯಮಂತ್ರಿಯನ್ನು ಅವಹೇಳನ ಮಾಡಿದ ಪೋಸ್ಟ್ ಇದಾಗಿದ್ದು, ಪ್ರಶಾಂತ್ ಪೂಜಾರಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದೆವು. ಈ ಪೋಸ್ಟ್ ನ ಕೆಳಗಡೆ ಕೆಟ್ಟದಾಗಿ ಬೈದ ಕಾಮೆಂಟ್‍ಗಳೂ, ಬೆದರಿಕೆಗಳೂ ಇದ್ದವು. ಕುಡ್ಲ ಟ್ರೋಲ್ ಪೇಜ್‍ನಲ್ಲಿ ಕುಮಾರಸ್ವಾಮಿ ಅವರನ್ನು ಅವಹೇಳನ ಮಾಡಿದ ಹಲವಾರು ಪೋಸ್ಟ್ ಗಳಿವೆ ಎಂದು ಸಿಸಿಬಿ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT