ADVERTISEMENT

ಕಾಶ್ಮೀರದಲ್ಲಿ ಉಗ್ರರ ಮನೆ ಇದ್ದದ್ದು ಮೊದಲೇ ಗೊತ್ತಿರಲಿಲ್ಲವೇ?: ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 23:40 IST
Last Updated 28 ಏಪ್ರಿಲ್ 2025, 23:40 IST
<div class="paragraphs"><p>ಸಂತೋಷ್ ಲಾಡ್</p></div>

ಸಂತೋಷ್ ಲಾಡ್

   

ಬೆಂಗಳೂರು: ‘ಪಹಲ್ಗಾಮ್‌ ದಾಳಿಯ ಬಳಿಕ ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಉಗ್ರರ ಮನೆ ಅಲ್ಲಿ ಇದ್ದದ್ದು ಗೊತ್ತಿರಲಿಲ್ಲವೇ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಆ ತಂತ್ರಜ್ಞಾನ, ಈ ತಂತ್ರಜ್ಞಾನ, ಎಐ ತಂತ್ರಜ್ಞಾನ ಎಂದು ಮೋದಿ ಹೇಳುತ್ತಾರೆ. ಆದರೆ, ಕಾಶ್ಮೀರದಲ್ಲಿ ಒಂದು ಡ್ರೋನ್‌ ಕೂಡ ಇಲ್ಲ’ ಎಂದರು.

ADVERTISEMENT

‘ಪಾಕಿಸ್ತಾನಕ್ಕೆ ನೀರು ನಿಲ್ಲಿಸಲು ಸಾಧ್ಯವಿದೆಯೇ? ಈ ಬಗ್ಗೆ ಪರಾಮರ್ಶೆ ಆಗಿದೆಯೇ? ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಮೊದಲೇ ಮಾಧ್ಯಮಗಳಿಗೆ ಸುದ್ದಿ ನೀಡಲಾಗುತ್ತಿದೆ. ವಾಸ್ತವ ವಿಷಯ ಮರೆಮಾಚಿ, ಜನರ ದಾರಿ ತಪ್ಪಿಸಲು ಇಂತಹ ವಿಚಾರ ಚರ್ಚೆಗೆ ಬರುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಯುದ್ಧ ಆರಂಭವಾಗಲಿದೆ. ಫೈಟರ್ ಜೆಟ್ ಸಿದ್ಧವಾಗಿದೆ ಎಂದೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಪಾಕಿಸ್ತಾನಕ್ಕೆ ನೀರು ಹೋಗುತ್ತಿಲ್ಲ ಎಂದು ಯಾವುದೊ ಕೆರೆ ನೀರು ತೋರಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಪುಲ್ವಾಮಾ ದಾಳಿ ಬಗ್ಗೆ ಬಿಜೆಪಿಯವರು ಯಾರೂ ಈಗ ಮಾತನಾಡುತ್ತಿಲ್ಲ. ಪಹಲ್ಗಾಮ್‌ ದಾಳಿ ಮುಂದಿಟ್ಟು ಮುಂಬರುವ ಬಿಹಾರ ಚುನಾವಣೆ ಎದುರಿಸಲು ಬಿಜೆಪಿಯವರು ಹೊರಟಿದ್ದಾರೆ’ ಎಂದೂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.