
ವಿಶ್ವ ಅಂಗವಿಕಲರ ದಿನ
ಬೆಂಗಳೂರು: ಪ್ರತಿ ವರ್ಷ ಡಿಸೆಂಬರ್ 3ರಂದು ವಿಶ್ವ ಅಂಗವಿಕಲರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಅಂಗವಿಕಲರಿಗೆ ಅವಕಾಶಗಳನ್ನು ನೀಡುವುದು, ಸಾಮಾಜಿಕ ಭದ್ರತೆ, ಅವರಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಭವಿಷ್ಯದಲ್ಲಿ ಅಂಗವೈಕಲ್ಯ ತಡೆಗಟ್ಟುವುದು ಮುಖ್ಯ ಉದ್ದೇಶವಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1981ರ ವರ್ಷವನ್ನು ವಿಕಲಚೇತನರ ಅಂತರರಾಷ್ಟ್ರೀಯ ವರ್ಷವೆಂದು ಘೋಷಿಸಿತು. ನಂತರದ ದಿನಗಳಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳು ಅಂಗವಿಕಲರ ದಿನವನ್ನು ಆಚರಣೆ ಮಾಡುತ್ತಿವೆ.
ಭಾರತ ಸರ್ಕಾರ ಅಂಗವಿಕಲರ ಕಾಯ್ದೆ 2016ರ ಅಡಿಯಲ್ಲಿ 21 ಅಂಗವೈಕಲ್ಯತೆ ಪಟ್ಟಿ ಪ್ರಕಟಿಸಿದೆ. ಈ 21 ಅಂಕವೈಕಲ್ಯತೆಯನ್ನು ಹೊಂದಿರುವವರು ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.
ಅಂಗವಿಕಲರ ಕಾಯ್ದೆ ಅಡಿಯಲ್ಲಿ ಗುರಿತಿಸಲಾಗಿರುವ ಅಂಕವೈಕಲ್ಯತೆಯ ಪಟ್ಟಿ ಇಲ್ಲಿದೆ...
* ಕುರುಡುತನ
* ಕಡಿಮೆ ದೃಷ್ಟಿ
* ಕುಷ್ಠರೋಗ
* ಶ್ರವಣದೋಷ
* ವಿವಿಧ ರೀತಿಯ ಅಂಗವೈಕಲ್ಯ
* ಕುಬ್ಜತೆ
* ಬೌದ್ಧಿಕ ಅಂಗವೈಕಲ್ಯ
* ಮಾನಸಿಕ ಅಸ್ವಸ್ಥತೆ
* ಆಟಿಸಂ
* ಸೆರೆಬ್ರಲ್ ಪಾಲ್ಸಿ
* ಸ್ನಾಯು ಡಿಸ್ಟ್ರೋಫಿ
* ದೀರ್ಘಕಾಲದ ನರವೈಜ್ಞಾನಿಕ ಪರಿಸ್ಥಿತಿಗಳು
* ನಿರ್ದಿಷ್ಟ ಕಲಿಕಾ ನ್ಯೂನತೆಗಳು
* ಮಲ್ಟಿಪಲ್ ಸ್ಕ್ಲೆರೋಸಿಸ್
* ಮಾತಿನ ನ್ಯೂನತೆ
* ಥಲಸ್ಸೆಮಿಯಾ
* ಹಿಮೋಫಿಲಿಯಾ
* ಸಿಕಲ್ ಸೆಲ್ ಕಾಯಿಲೆ
* ಕಿವುಡ-ಕುರುಡುತನ ಸೇರಿದಂತೆ ಬಹು ವಿಕಲಾಂಗತೆಗಳು
* ಆಸಿಡ್ ದಾಳಿಗೆ ತುತ್ತಾದವರು
* ಪಾರ್ಕಿನ್ಸನ್ ಕಾಯಿಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.