ADVERTISEMENT

ತೆರಿಗೆದಾರರಿಗೆ ಪ್ರಶ್ನಿಸುವ ಅಧಿಕಾರವೂ ಇದೆ:  ಆರ್. ಅಶೋಕ 

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 15:42 IST
Last Updated 20 ಅಕ್ಟೋಬರ್ 2025, 15:42 IST
<div class="paragraphs"><p>&nbsp;ಆರ್. ಅಶೋಕ&nbsp;</p></div>

 ಆರ್. ಅಶೋಕ 

   

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಯಮಿಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ರಸ್ತೆ ಸರಿಪಡಿಸಿ ಎಂದರೆ ಇವರು ನೀತಿ ಪಾಠ ಹೇಳುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೋಹನ್‌ದಾಸ್‌ ಪೈ ಹಾಗೂ ಕಿರಣ್ ಮಜುಂದಾರ್ ಷಾ ಪ್ರಶ್ನೆ ಮಾಡಿದರೆ ಅವರನ್ನೂ ಶಿವಕುಮಾರ್‌ ಟೀಕಿಸಿದ್ದಾರೆ. ಬೆಂಗಳೂರಿನಿಂದ ಎಲ್ಲವನ್ನೂ ಪಡೆದಿದ್ದಾರೆ ಎನ್ನಲು ಈ ನಗರವನ್ನು ಸಿದ್ದರಾಮಯ್ಯ– ಶಿವಕುಮಾರ್ ಕಟ್ಟಿ ಬೆಳೆಸಿದ್ದಲ್ಲ’ ಎಂದು ಕಿಡಿಕಾರಿದರು.

ADVERTISEMENT

ತೆರಿಗೆ ಕಟ್ಟುವವರಿಗೆ ಪ್ರಶ್ನೆ ಕೇಳುವ ಅಧಿಕಾರವೂ ಇದೆ. ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ಉದ್ಯಮಿಗಳು ‘ಎಕ್ಸ್‌’ ಮೂಲಕ ಪ್ರಶ್ನೆ ಕೇಳಿದ್ದರು. ಆಗ ಅಧಿಕಾರಗಳ ಜತೆ ಚರ್ಚೆ ನಡೆಸಿ ಕೂಡಲೇ ಹಣ ಬಿಡುಗಡೆ ಮಾಡಿ ರಸ್ತೆ ದುರಸ್ತಿ ಮಾಡಲಾಗಿತ್ತು. ಸಮಸ್ಯೆ ಬಂದಾಗ ಟೀಕಿಸಿದವರನ್ನು ತೆಗಳುವುದು ಬಿಟ್ಟು ಸಮಸ್ಯೆಗಳನ್ನು ಬಗೆಹರಿಸಲಿ. ರಸ್ತೆ ಗುಂಡಿ ಮುಚ್ಚಲು ₹2,000 ಕೋಟಿ ಖರ್ಚು ಮಾಡಿದ್ದಾಗಿ ಸರ್ಕಾರ ಹೇಳುತ್ತಿದೆ. ಅದರ ಫಲಿತಾಂಶ ಕಾಣುತ್ತಿಲ್ಲ. ಆ ಹಣ ಎಲ್ಲಿ ಹೋಗಿದೆ ಎಂದು ಅಶೋಕ ಪ್ರಶ್ನಿಸಿದರು.

ಪ್ರವಾಹ ಬಂದಾಗ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಸಭೆ ನಡೆಸದೆ, ಕೇಂದ್ರ ಸರ್ಕಾರದ ಬಳಿ ಹೋಗದೆ ಪರಿಹಾರ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ನಿಯಮದ ಅನುಸಾರ ಪರಿಹಾರ ಬಿಡುಗಡೆ ಮಾಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.