ADVERTISEMENT

ಬರ ಕಾಮಗಾರಿಗೆ ₹162 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:15 IST
Last Updated 12 ಫೆಬ್ರುವರಿ 2019, 20:15 IST

ಬೆಂಗಳೂರು: ಬರ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಕಂದಾಯ ಇಲಾಖೆ ಮಂಗಳವಾರ ₹162 ಕೋಟಿ ಬಿಡುಗಡೆ ಮಾಡಿದೆ.

ಮುಂಗಾರು ಹಂಗಾಮಿನಲ್ಲಿ 100 ತಾಲ್ಲೂಕುಗಳನ್ನು ಹಾಗೂ ಹಿಂಗಾರಿನಲ್ಲಿ 156 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ತುರ್ತು ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರುಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಅನುದಾನ ಅಗತ್ಯ. ಹೀಗಾಗಿ, ಪ್ರತಿ ತಾಲ್ಲೂಕಿಗೆ ₹1 ಕೋಟಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಬರಪೀಡಿತವೆಂದು ಘೋಷಿಸಿ ಹಿಂಗಾರಿನಲ್ಲಿ ಕೈಬಿಟ್ಟಿರುವ ಚನ್ನಪಟ್ಟಣ, ಗುಬ್ಬಿ, ಕುಣಿಗಲ್‌, ಕೊಳ್ಳೇಗಾಲ, ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕುಗಳಿಗೆ ತಲಾ ₹1 ಕೋಟಿ ಬಿಡುಗಡೆಗೊಳಿಸಲಾಗಿದೆ. ಹಣ ಬಳಕೆಯಲ್ಲಿ ಯಾವುದೇ ಲೋಪವಾದರೆ, ಆಯಾ ಜಿಲ್ಲಾಧಿಕಾರಿಯವರನ್ನೇ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಬೆಂಗಳೂರು: 2019–20ನೇ ಸಾಲಿನಲ್ಲಿ 250 ದಿನಗಳ ಶೈಕ್ಷಣಿಕ ಅವಧಿ ಇರುವಂತೆ ಮಧ್ಯಂತರ ರಜೆ ಹಾಗೂ ಬೇಸಿಗೆ ರಜೆಗಳ ಮಾಹಿತಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಶಾಲಾ ದಿನಗಳ ಮೊದಲನೇ ಅವಧಿ 2019ರ ಮೇ 29ಕ್ಕೆ ಆರಂಭವಾಗಿ ಅ. 5ಕ್ಕೆ ಕೊನೆಗೊಳ್ಳಲಿದೆ. ಎರಡನೇ ಅವಧಿ ಅ. 21ರಿಂದ ಆರಂಭವಾಗಿ 2020ರ ಏ.11ರಂದು ಮುಕ್ತಾಯವಾಗಲಿದೆ. ಈ ವರ್ಷದ ಅ. 6ರಿಂದ 20ರ ವರೆಗೆ ಮಧ್ಯಂತರ ರಜೆ, 2020 ಏಪ್ರಿಲ್‌ 12ರಿಂದ ಮೇ 24ರ ವರೆಗೆ ಬೇಸಿಗೆ ರಜೆ ನೀಡಲು ನಿರ್ಧರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.