ADVERTISEMENT

ಹೊಸ ಸರ್ಕಾರ ಬಂದ ಬಳಿಕ ರಾಜ್ಯಕ್ಕೆ ಬರ ಪ್ಯಾಕೇಜ್

ಪಿಟಿಐ
Published 13 ಮೇ 2019, 18:49 IST
Last Updated 13 ಮೇ 2019, 18:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತೀವ್ರ ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆಬರ ಪರಿಹಾರ ಪ್ಯಾಕೇಜ್‌ ದೊರೆಯಲು ವಿಳಂಬವಾಗುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಹೊಸ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕವಷ್ಟೇ ಪ್ಯಾಕೆಜ್‌ಗೆ ಒಪ್ಪಿಗೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬರದಿಂದಾಗಿಹಿಂಗಾರು ಅವಧಿಯಲ್ಲಿ ಆದಂತಹ ಬೆಳೆ ನಷ್ಟದ ಕುರಿತು ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡ ವರದಿ ಸಿದ್ಧಪಡಿಸಿತ್ತು. ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ₹2,064 ಕೋಟಿ ಆರ್ಥಿಕ ನೆರವು ಕೋರಿರಾಜ್ಯ ಸರ್ಕಾರವೂ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.ಕೇಂದ್ರ ತಂಡ ಕೃಷಿ ಇಲಾಖೆಗೆ ವರದಿ ಸಲ್ಲಿಸಿದ್ದು, ಗೃಹ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವಉನ್ನತ ಮಟ್ಟದ ಸಮಿತಿ(ಎಚ್ಎಲ್‌ಸಿ)ಪರಿಹಾರ ಕುರಿತು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೇಂದ್ರ ಸರ್ಕಾರಎಚ್ಎಲ್‌ಸಿ ಸಭೆ ನಡೆಸಲುಮಾದರಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಆದರೆ ಹೊಸ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕವಷ್ಟೇ ಈ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

156 ತಾಲ್ಲೂಕಿನಲ್ಲಿ ಬರ

30 ಜಿಲ್ಲೆಗಳ 156 ತಾಲ್ಲೂಕುಗಳನ್ನುಬರಪೀಡಿತ ತಾಲ್ಲೂಕುಗಳಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಈ ಪೈಕಿ 107 ತಾಲ್ಲೂಕುಗಳಲ್ಲಿತೀವ್ರ ಬರ ಪರಿಸ್ಥಿತಿ ಇದೆ. 20.40 ಲಕ್ಷ ಹೆಕ್ಟೇರ್ ಕೃಷಿ ಭೂಮಿಮಳೆ ಕೊರತೆ ಎದುರಿಸಿದ್ದು, 19.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. 2018–19 ಮುಂಗಾರು ಅವಧಿಯಲ್ಲೂ ರಾಜ್ಯ ಬರ ಎದುರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.