ADVERTISEMENT

ಡ್ರಗ್ಸ್ ಪ್ರಕರಣ; ಸಿನಿಮಾ ಛಾಯಾಗ್ರಾಹಕನಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 4:01 IST
Last Updated 18 ಡಿಸೆಂಬರ್ 2021, 4:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ‘ಪ್ರೆಸ್ಟಿಜ್ ಗ್ರೂಪ್’ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಮ್ ಜುಂಗ್ ಅವರನ್ನು ವಿಚಾರಣೆ ನಡೆಸಿದ್ದ ಗೋವಿಂದಪುರ ಠಾಣೆ ಪೊಲೀಸರು, ಇದೀಗ ಮತ್ತೆ ಇಬ್ಬರಿಗೆ ನೋಟಿಸ್ ನೀಡಿದ್ದಾರೆ.

‘ಡ್ರಗ್ಸ್ ಮಾರಾಟ ಆರೋಪದಡಿ ಬಂಧಿಸಲಾಗಿರುವ ನೈಜಿರಿಯಾದ ಥಾಮಸ್ ಕಾಲೂ ಜೊತೆ ನಂಟು ಹೊಂದಿದ್ದ ಕಾರಣಕ್ಕೆ ಅಂಜುಮ್ ಜುಂಗ್ ವಿಚಾರಣೆ ನಡೆಸಲಾಗಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ, ಕೇರಳದ ಸಿನಿಮಾ ಛಾಯಾಗ್ರಾಹಕ ಸಂಜಯ್ ಹ್ಯಾರಿಸ್ ಹಾಗೂ ಪಾರ್ಟಿ ಆಯೋಜಕಿ ಆರ್ಜೂ ಸೇಠ್ ಎಂಬುವರಿಗೂ ನೋಟಿಸ್ ಕೊಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅನಾರೋಗ್ಯ ಕಾರಣ ನೀಡಿರುವ ಸಂಜಯ್, ಕಾಲಾವಕಾಶ ಕೋರಿದ್ದಾರೆ. ಆರ್ಜೂ ತಲೆಮರೆಸಿಕೊಂಡಿದ್ದಾರೆ. ಡ್ರಗ್ಸ್ ಪೆಡ್ಲರ್ ಥಾಮಸ್ ಜೊತೆ ಒಡನಾಟ ಹೊಂದಿದ್ದ ಇಬ್ಬರೂ ಡ್ರಗ್ಸ್ ಖರೀದಿಸುತ್ತಿದ್ದ ಮಾಹಿತಿ ಇದೆ. ಅವರಿಬ್ಬರ ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.