ADVERTISEMENT

‘ಹರಾಂನ ಕಥೆಗಳು’ ಕೃತಿಗೆ ಪ್ರಶಸ್ತಿ

ಕಥಾ ಸ್ಪರ್ಧೆಯಲ್ಲಿ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಗೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:01 IST
Last Updated 21 ಜನವರಿ 2020, 20:01 IST
ಕೆ.ಎಚ್.ಮುಸ್ತಫಾ ‌
ಕೆ.ಎಚ್.ಮುಸ್ತಫಾ ‌   

ಬೆಂಗಳೂರು:ಕೊಡಗಿನ ಕೆ.ಎಚ್.ಮುಸ್ತಫಾ ‌ಅವರ ಅಪ್ರಕಟಿತ ಕಥಾ ಸಂಕಲನ ‘ಹರಾಂನ ಕಥೆಗಳು’ 2019ರ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಆಯ್ಕೆಯಾಗಿದೆ.

ಈ ಪ್ರಶಸ್ತಿಯು ₹ 10 ಸಾವಿರ ಹಾಗೂ ಫಲಕವನ್ನು ಒಳಗೊಂಡಿದೆ.ಈ ಹೊತ್ತಿಗೆ ಕಥಾ ಸ್ಪರ್ಧೆಯ ಫಲಿತಾಂಶವೂ ಪ್ರಕಟವಾಗಿದೆ. ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಗೋವಿಂದರಾಜು ಎಂ. ಕಲ್ಲೂರು ಅವರ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯು ಪ್ರಥಮ ಬಹುಮಾನ ಪಡೆದಿದ್ದು, ₹ 5 ಸಾವಿರ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿದ್ಯಾರ್ಥಿ ಕಪಿಲ ಪಿ. ಹುಮನಾಬಾದೆ ಅವರ ‘ಬಿಸಿಲು’ ಕಥೆಗೆ ದ್ವಿತೀಯ ಬಹುಮಾನ (₹ 3 ಸಾವಿರ ನಗದು),ಬೆಂಗಳೂರಿನ ಶಿಕ್ಷಕ ದಾದಾಪೀರ್ ಜೈಮನ್ ಅವರ ‘ಎಲ್ಲೋ ಯಲ್ಲೋ...’ ಕಥೆ ತೃತೀಯ ಬಹುಮಾನ (₹ 2 ಸಾವಿರ ನಗದು) ಪಡೆದಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಬಸನಗೌಡ ಪಾಟೀಲ ಅವರ ‘ಮೈಲಿಗೆ ಗುಡಿಸಲು’ ಮತ್ತು ಪುತ್ತೂರಿನ ಪಾಲಿಟೆಕ್ನಿಕ್ ಕಾಲೇಜಿನ ಕನ್ನಡ ಉಪನ್ಯಾಸಕ ಎನ್.ವಿಶ್ವನಾಥ ಅವರ ‘ಋಣ’ ಮೆಚ್ಚುಗೆ ಪಡೆದ ಕಥೆಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.