ADVERTISEMENT

ಲಘು ಭೂಕಂಪನ: ಬೆಚ್ಚಿದ ಜನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 20:08 IST
Last Updated 20 ಡಿಸೆಂಬರ್ 2020, 20:08 IST

ಕೆಜಿಎಫ್: ನಗರದ ರಾಬರ್ಟ್‌ಸನ್‌ಪೇಟೆಯಲ್ಲಿ ಭಾನುವಾರ ರಾತ್ರಿ 8.40ರ ಸಮಯದಲ್ಲಿ ಲಘು ಭೂಕಂಪನ ಸಂಭವಿಸಿದೆ.ಭೂಮಿ ನಡುಗಿದ ಶಬ್ದಕ್ಕೆ ಜನ ಬೆಚ್ಚಿಬಿದ್ದು ಮನೆಯ ಹೊರಗೆ ಓಡಿಬಂದರು.

ಸಾಮಾನ್ಯವಾಗಿ ಮಳೆಗಾಲದಲ್ಲಿ ಚಿನ್ನದ ಗಣಿ ಸುರಂಗದಲ್ಲಿ ಕಲ್ಲುಗಳು ಚಲನೆಯಾದ ಸಂದರ್ಭದಲ್ಲಿ ಕಂಪನ ಮತ್ತು ಶಬ್ದದ ಅನುಭವವಾಗುತ್ತದೆ. ಆದರೆ, ಈಗಮಳೆಯಿಲ್ಲದಿದ್ದರೂ ಬಹಳ ದಿನದ ನಂತರ ಭೂಕಂಪನದ ಅನುಭವವಾಗಿದೆ. ಚಿನ್ನದ ಗಣಿಯ ಕಂಪನವಲ್ಲ, ನಿಜವಾಗಿ ಭೂಕಂಪವಾಗಿರಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT