ADVERTISEMENT

ಮೈಸೂರು ಭಾಗದಲ್ಲಿ ಭೂಕಂಪನ: ಮಾಲುಗೇನ ಹಳ್ಳಿ ಕಂಪನದ ಕೇಂದ್ರಬಿಂದು

ಹೊಳೆನರಸೀಪುರ ಮಣ್ಣಿನ ಗೋಡೆ ಕುಸಿತ, ಮನೆ, ಶಾಲೆ ಬಿರುಕು

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:40 IST
Last Updated 23 ಜೂನ್ 2022, 19:40 IST
   

ಮೈಸೂರು: ಮೈಸೂರು ಭಾಗದ ಮೈಸೂರು, ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಯ ಕೆಲವೆಡೆ ಗುರುವಾರ ಬೆಳಗಿನ ಜಾವ 4.37ರಲ್ಲಿ ಭೂಕಂಪನದ ಅನುಭವವಾಗಿದೆ. ಜನ ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದರು. ಎಲ್ಲೆಡೆ ಆತಂಕ ಆವರಿಸಿತು.

ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ಮಾಲುಗೇನ ಹಳ್ಳಿ ಕಂಪನದ ಕೇಂದ್ರಬಿಂದುವಾಗಿದ್ದು, 40–50 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿದೆ. ರಿಕ್ಟರ್‌ ಮಾಪನದಲ್ಲಿ 3.4 ರಷ್ಟು ತೀವ್ರತೆ ದಾಖಲಾಗಿದೆ. ದೊಡ್ಡಕಾಡನೂರಿನಲ್ಲಿ ಮಣ್ಣಿನ ಗೋಡೆಯ ಮನೆ ಕುಸಿದಿದ್ದು, ಆಲೂರು ತಾಲ್ಲೂಕಿನ ಕೆಲ ಶಾಲೆ, ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿದೆ.

ಅರಕಲಗೂಡು ಪಟ್ಟಣ, ತಾಲ್ಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಳ್ಳಿ, ಹೊಳೆನರಸೀಪುರ ತಾಲ್ಲೂಕಿನ ಚಿಟ್ನಳ್ಳಿ, ಹೌಸಿಂಗ್ ಬೋರ್ಡ್, ಆಲೂರು ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿಯಲ್ಲಿ ಭೂಕಂಪನವಾಗಿದೆ.

ADVERTISEMENT

ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣ, ತಾಲ್ಲೂಕಿನ ತಂದ್ರೆ, ಅಂಕನಹಳ್ಳಿ, ಹೆಬ್ಸೂರಿನಲ್ಲೂ ಭೂಕಂಪನವಾಗಿದೆ. ‌ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳು, ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್, ಅಮ್ಮಳ್ಳಿ ಮತ್ತು ನೇಗಳ್ಳೆ ಗ್ರಾಮ, ಮಡಿಕೇರಿ ತಾಲ್ಲೂಕಿನ ದೇವಸ್ತೂರಿನಲ್ಲಿ ಭೂಮಿ ಕಂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.