ಹೊಸಪೇಟೆ: ಇಲ್ಲಿನ ವಿಶ್ವ ಪಾರಂಪರಿಕ ತಾಣ ಹಂಪಿ ಸುತ್ತಮುತ್ತ ಶುಕ್ರವಾರ ನಸುಕಿನ ಜಾವ ಭೂಕಂಪನ ಆಗಿದೆ ಎನ್ನುವುದು ಕೇವಲ ವದಂತಿಯಷ್ಟೇ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.
ಹಂಪಿ ಸುತ್ತಮುತ್ತ ಭೂಕಂಪನ ಆಗಿಲ್ಲ. ಒಂದುವೇಳೆ ಆಗಿದ್ದರೆ ಅದರ ಪ್ರಮಾಣ ದಾಖಲಾಗುತ್ತಿತ್ತು. ಆದರೆ, ಭೂಗರ್ಭ ಶಾಸ್ತ್ರಜ್ಞರು ಆ ರೀತಿಯ ಯಾವುದೇ ಘಟನೆ ಘಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಸುಕಿನ ಜಾವ ಹಂಪಿ ಸುತ್ತಮುತ್ತ ಲಘು ಭೂಕಂಪನವಾಗಿದೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ಹಬ್ಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.