ADVERTISEMENT

ಖಾಸಗಿ ವೈದ್ಯಕೀಯ ಕಾಲೇಜು ಶುಲ್ಕ ಶೇ 10ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 21:16 IST
Last Updated 25 ಜುಲೈ 2023, 21:16 IST
ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ?
ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ?   

ಬೆಂಗಳೂರು: ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇ 10ರಷ್ಟು ಶುಲ್ಕ ಏರಿಕೆ ಮಾಡಲಿವೆ.

ಶೇ 20ರಷ್ಟು ಶುಲ್ಕ ಹೆಚ್ಚಳದ ಕೋರಿಕೆಯನ್ನು ತಿರಸ್ಕರಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ, ಪ್ರಸಕ್ತ ವರ್ಷದಿಂದ ಶೇ 10ರಷ್ಟು ಹೆಚ್ಚಳ ಮಾಡಲು ಸಮ್ಮತಿಸಿದೆ.

‘2022-23ನೇ ಶೈಕ್ಷಣಿಕ ವರ್ಷದಲ್ಲೇ ಅಲ್ಪ ಸಂಖ್ಯಾತರ ಒಡೆತನದ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಹಾಗಾಗಿ, ಈ ವರ್ಷ ಅಲ್ಪ ಸಂಖ್ಯಾತರ ಕಾಲೇಜುಗಳನ್ನು ಹೊರತುಪಡಿಸಿ, ಉಳಿದ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು. 

ADVERTISEMENT

ಕಳೆದ ವರ್ಷ ಖಾಸಗಿ ಕೋಟಾದ ಸೀಟುಗಳಿಗೆ ಮಾತ್ರ ಶುಲ್ಕ ಹೆಚ್ಚಿಸಬೇಕು ಎಂಬ ಸರ್ಕಾರ ಷರತ್ತುಗಳನ್ನು ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ ಒಪ್ಪಿರಲಿಲ್ಲ. ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘ ಒಪ್ಪಿದ್ದರಿಂದ ಅಲ್ಪ ಸಂಖ್ಯಾತರ ಒಡೆತನದ ಕಾಲೇಜುಗಳಿಗಷ್ಟೇ ಸರ್ಕಾರ ಅನುಮತಿ ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.