ADVERTISEMENT

ಬೆಂಗಳೂರಲ್ಲಿ ಆರೈಕೆ ಇಲ್ಲದೆ ಪ್ರಾಣಬಿಟ್ಟ ಒಂಟಿ ವೃದ್ಧೆ 

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 13:15 IST
Last Updated 26 ಏಪ್ರಿಲ್ 2021, 13:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಶಂಕರಪುರ ವಾರ್ಡ್‌ನ ಜೆ.ಸಿ.ನಗರದಲ್ಲಿ ಒಂಟಿಯಾಗಿ ವಾಸವಿದ್ದ ಕೊರೊನಾ ಸೋಂಕಿತ ವೃದ್ಧೆಯೊಬ್ಬರು ಸೂಕ್ತ ಆರೈಕೆ ಇಲ್ಲದೇ ಪ್ರಾಣ ಬಿಟ್ಟಿದ್ದಾರೆ.

’70 ವರ್ಷದ ವೃದ್ಧೆ ಒಂಟಿಯಾಗಿ ವಾಸವಿದ್ದರು. ಮನೆ ಕೆಲಸ ಹಾಗೂ ಅಡುಗೆ ಎಲ್ಲವನ್ನೂ ಒಬ್ಬರೇ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅಂದಿನಿಂದಲೇ ಅವರು ಹಾಸಿಗೆ ಹಿಡಿದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವೃದ್ಧೆಯನ್ನು ಆರೈಕೆ ಮಾಡಲು ಹಾಗೂ ಚಿಕಿತ್ಸೆ ಕೊಡಲು ಯಾರೂ ಇರಲಿಲ್ಲ. ತೀವ್ರ ಅನಾರೋಗ್ಯರಿಂದ ನರಳಿ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ವೃದ್ಧೆ ಹೊರಗೆ ಬಾರದಿದ್ದರಿಂದ ಅನುಮಾನಗೊಂಡಿದ್ದ ಸ್ಥಳೀಯರು, ವಾರ್ಡ್‌ ಮುಖಂಡರಿಗೆ ವಿಷಯ ತಿಳಿಸಿದ್ದರು. ನಂತರ, ಮನೆಯೊಳಗೆ ಹೋಗಿ ನೋಡಿದಾಗ ವೃದ್ಧೆ ಮೃತಪಟ್ಟಿದ್ದು ಗೊತ್ತಾಗಿದೆ’ ಎಂದೂ ತಿಳಿಸಿವೆ.

ADVERTISEMENT

‘ಸ್ಥಳೀಯ ಸ್ವಯಂಸೇವಕರೇ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.