ADVERTISEMENT

ಗೌಡರ ಅಬ್ಬರದ ಪ್ರಚಾರ, ಡಿಕೆಶಿ ರೋಡ್‌ ಷೋ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 19:06 IST
Last Updated 27 ಅಕ್ಟೋಬರ್ 2020, 19:06 IST

ಶಿರಾ: ದಸರಾ ಹಬ್ಬದಿಂದಾಗಿ ಎರಡು ದಿನಗಳಿಂದ ಶಿರಾದಲ್ಲಿ ತಣ್ಣಗಾಗಿದ್ದ ಚುನಾವಣಾ ಪ್ರಚಾರದ ಅಬ್ಬರಮಂಗಳವಾರ ಮತ್ತೆ ಚುರುಕುಗೊಂಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿವಿಧ ಗ್ರಾಮಗಳಲ್ಲಿ ರೋಡ್‌ ಷೋ ನಡೆಸಿದರು. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ, ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಅವರು ಶಿರಾ ಕ್ಷೇತ್ರದ ಹಳ್ಳಿ, ಹಳ್ಳಿಗಳಲ್ಲಿ ತಿರುಗಿ ಬಿರುಸಿನ ಪ್ರಚಾರ ನಡೆಸಿದರು.

ದಸರಾ ಹಬ್ಬದ ಆಚರಣೆಗೆ ಊರಿಗೆ ತೆರಳಿದ್ದ ದೇವೇಗೌಡರು ಮತ್ತೆ ಮಂಗಳವಾರದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಡಿ.ಕೆ.ಶಿವಕುಮಾರ್ ಬುಧವಾರವೂ ರೋಡ್‌ ಷೋ ನಡೆಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.