ADVERTISEMENT

ಬೇಡಿಕೆ ಕುಸಿದ ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ಶೇ 50 ಕಡಿತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 0:43 IST
Last Updated 10 ಜುಲೈ 2025, 0:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಬೆಂಗಳೂರು: ಮೆಕ್ಯಾನಿಕಲ್‌, ಸಿವಿಲ್‌ ಎಂಜಿನಿಯರಿಂಗ್‌ ಸೇರಿದಂತೆ ಕೆಲವು ಕೋರ್ಸ್‌ಗಳ ಶುಲ್ಕವನ್ನು 2025–26ನೇ ಸಾಲಿನಿಂದ ಅನ್ವಯವಾ ಗುವಂತೆ ಶೇ 50ರಷ್ಟು ಕಡಿತ ಮಾಡಿ, ಬೇಡಿಕೆ ಇರುವ ಕೋರ್ಸ್‌ಗಳ ಶುಲ್ಕವನ್ನು ಶೇ 7.5ರಷ್ಟು ಹೆಚ್ಚಳ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ADVERTISEMENT

ಬೇಡಿಕೆ ಕುಸಿದು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಜವಳಿ ತಂತ್ರಜ್ಞಾನ, ರೇಷ್ಮೆ ತಂತ್ರಜ್ಞಾನ ಮತ್ತು ಆಟೋಮೊಬೈಲ್‌ ಕೋರ್ಸ್‌ಗಳಿಗೂ ಶುಲ್ಕ ಕಡಿತದ ಸೌಲಭ್ಯ ಸಿಗಲಿದೆ. ಶುಲ್ಕ ವಿನಾಯಿತಿ ಸೌಲಭ್ಯ ಪಡೆಯಲು ಬಯಸುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಕೆಇಎಗೆ ಮನವಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಕಳೆದ ವರ್ಷ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ 5,723 ಸೀಟುಗಳಿದ್ದು, ಅವುಗಳಲ್ಲಿ 2,883 ಸೀಟುಗಳು ಹಂಚಿಕೆಯಾಗಿದ್ದವು. ಮೆಕ್ಯಾನಿಕಲ್‌ ವಿಭಾಗದ 5,977 ಸೀಟುಗಳಲ್ಲಿ 2,783 ಸೀಟುಗಳು

ಭರ್ತಿಯಾಗಿದ್ದವು.

ಕೆಲ ಕೋರ್ಸ್‌ಗಳ ಶುಲ್ಕ ಶೇ 7.5 ಹೆಚ್ಚಳ: ವಾಸ್ತುಶಿಲ್ಪ ಶಾಸ್ತ್ರ ಸೇರಿದಂತೆ ಕೆಲ ಕೋರ್ಸ್‌ಗಳ ಶುಲ್ಕವನ್ನು ಖಾಸಗಿ ಕಾಲೇಜುಗಳಿಗೆ ಶೇ 7.5ರಷ್ಟು, ಸರ್ಕಾರಿ ಕಾಲೇಜುಗಳಿಗೆ ಶೇ 5ರಷ್ಟು ಹೆಚ್ಚಿಸಲಾಗಿದೆ. ಈ ಶುಲ್ಕವು ವಿಶ್ವವಿದ್ಯಾಲಯ ನೋಂದಣಿ ಮತ್ತು ಇತರ ಸಂಸ್ಕರಣಾ ಶುಲ್ಕಗಳನ್ನು ಹೊರತುಪಡಿಸಿದೆ.

ಕಳೆದ ವರ್ಷ ಟೈಪ್-1 ಖಾಸಗಿ ಕಾಲೇಜುಗಳಲ್ಲಿ ಸಿಇಟಿ ಸೀಟುಗಳಿಗೆ ₹76,135, ಟೈಪ್-2 ಕಾಲೇಜುಗಳಿಗೆ ₹84,596, ಕಾಮೆಡ್-ಕೆ ಸೀಟುಗಳಿಗೆ ಟೈಪ್-1 ಕಾಲೇಜುಗಳಲ್ಲಿ ₹1,86,111 ಮತ್ತು ಟೈಪ್-2 ಕಾಲೇಜುಗಳಲ್ಲಿ ₹2,61,477 ಶುಲ್ಕವಿತ್ತು.

ಸೂಪರ್‌ನ್ಯೂಮರರಿ ಕೋಟಾದ ಅಡಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಅಂತಹ ವಿದ್ಯಾರ್ಥಿ ಗಳಿಗೆ ಮೊದಲ ವರ್ಷದಲ್ಲಿ ₹20,000 ಶುಲ್ಕ ವಿಧಿಸಲು ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.