ಬೆಂಗಳೂರು: ಗೃಹಬಳಕೆಯ ವಿದ್ಯುತ್‌ಗೆ 200 ಯುನಿಟ್‌ವರೆಗೆ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡವರು ತಮ್ಮ ಅರ್ಜಿಯ ಸ್ಥಿತಿಗತಿ ಪರಿಶೀಲನೆಗಾಗಿ ಅಂತರ್ಜಾಲ ಕೊಂಡಿಯನ್ನು ಇಂಧನ ಇಲಾಖೆ ಬಿಡುಗಡೆ ಮಾಡಿದೆ.
ಜೂನ್ 18ರಂದು ನೋಂದಣಿ ಪ್ರಕ್ರಿಯೆ ಆರಂಭಗೊಂಡಿತು. ಬೆಸ್ಕಾಂ, ಸೆಸ್ಕ್, ಜೆಸ್ಕಾಂ, ಹೆಸ್ಕಾಂ, ಎಚ್‌ಆರ್‌ಇಸಿಎಸ್ ಹಾಗೂ ಮೆಸ್ಕಾಂಗಳನ್ನು ಒಳಗೊಂಡು ಈವರೆಗೂ ಒಂದು ಕೋಟಿಗೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
ಹೀಗೆ ನೋಂದಾಯಿಸಿಕೊಂಡ ಗ್ರಾಹಕರು ತಮ್ಮ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/StatucTrack/Track_Status ಮೂಲಕ ಪರಿಶೀಲಿಸಿಕೊಳ್ಳಬಹುದು.
ಇದರಲ್ಲಿ ಅರ್ಜಿದಾರರು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಮ್ಮ ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಸಂಖ್ಯೆಯನ್ನು ನಮೂದಿಸಬೇಕು.
ಅರ್ಜಿ ಸ್ವೀಕೃತವಾಗಿದ್ದರೆ, ‘ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರಗೊಂಡಿದ್ದು, ಅದನ್ನು ಎಸ್ಕಾಂಗೆ ಕಳುಹಿಸಲಾಗಿದೆ’ ಎಂಬ ಸಂದೇಶ ಸಿಗಲಿದೆ.
ಹೀಗಿದ್ದರೂ ಕೆಲವೊಂದು ಗೊಂದಲಗಳು ಇದರಲ್ಲಿ ಹಾಗೇ ಉಳಿದಿವೆ. ಕೆಲವು ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್ ದಾಖಲೆಗಳನ್ನು ನಮೂದಿಸಿ ನೋಂದಾಯಿಸಿಕೊಂಡಿದ್ದರೂ, ‘ಮಾಹಿತಿ ಲಭ್ಯವಿಲ್ಲ. ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಿ’ ಎಂಬ ಸಲಹೆ ನೀಡುತ್ತದೆ.
ಹಾಗೆಂದು ನೋಂದಾಯಿಸಲು ಮುಂದಾದರೆ, ‘ಈ ಆಧಾರ್ ಸಂಖ್ಯೆ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿದೆ’ ಎಂಬ ಸಂದೇಶ ಬರುತ್ತಿರುವುದು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.