ADVERTISEMENT

ಶಂಕಿತ ಪ್ರತಿ ವ್ಯಕ್ತಿಯ ಮೇಲೆ ನಿಗಾ: ಸಚಿವ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 13:05 IST
Last Updated 23 ಅಕ್ಟೋಬರ್ 2022, 13:05 IST
 ಸಚಿವ ಜ್ಞಾನೇಂದ್ರ
ಸಚಿವ ಜ್ಞಾನೇಂದ್ರ   

ಶಿರಸಿ: 'ಪಿ.ಎಫ್.ಐ. ಸಂಘಟ‌ನೆಯೂ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಪ್ರತಿ ವ್ಯಕ್ತಿಯ ಮೇಲೆ ಗೃಹ ಇಲಾಖೆ ನಿಗಾ ಇಟ್ಟಿದೆ' ಎಂದು ಗೃಹ ಸಚಿವ ಆರಗ ಜ್ಞಾನೆಂದ್ರ ಹೇಳಿದರು.

ಇಲ್ಲಿ ಭಾನುವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, 'ಶಂಕಿತರ ಚಲನವಲನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ' ಎಂದರು.

'ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಿ.ಬಿ.ಐ. ಸಲ್ಲಿಸಿದ ವರದಿ ಬಗ್ಗೆ ಪರೇಶ್ ತಂದೆ ಸೇರಿದಂತೆ ಹಲವರು ಅಪಸ್ವರ ವ್ಯಕ್ತಪಡಿಸಿದ್ದಾರೆ‌. ಪ್ರಕರಣದ ಮರು ತನಿಖೆಗೆ ಮನವಿ ಮಾಡಿದ್ದಾರೆ. ಮರು ತನಿಖೆಗೆ ನೀಡುವ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

'ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ನೀಗಿಸಿ, ಸಿಬ್ಬಂದಿ ಸಂಖ್ಯೆ ದೂಗಿಸುವ ನಿಟ್ಟಿನಲ್ಲಿ ಅಂತರ್ ಜಿಲ್ಲಾ ವರ್ಗಾವಣೆ ರದ್ದುಪಡಿಸಲಾಗಿದೆ. ರದ್ದು ನಿರ್ಧಾರ ಹಿಂಪಡೆಯಲು ಒತ್ತಡವೂ ಇದೆ. ಈ ಬಗ್ಗೆ ಪುನರ್ ಪರಿಶೀಲಿಸಿ ನಿರ್ಧರಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.