ADVERTISEMENT

ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ನಿಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 17:50 IST
Last Updated 22 ಜುಲೈ 2018, 17:50 IST
   

ವಿಜಯಪುರ:ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್(69) ಅವರು ಭಾನುವಾರ ನಸುಕಿನಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು.

ಅವರ ಪುತ್ರಿ ನಂದಿನಿ ಅವರು ಮಹಾರಾಷ್ಟ್ರದ ಯಾವತ್‌ಮಲ್‌ನಲ್ಲಿ ವಾಸವಾಗಿದ್ದಾರೆ. ನಂದಿನಿ ಅವರು ತಮ್ಮ ಪತಿಯ ನಿಧನ ನಂತರ ಯಾವತ್‌ಮಲ್‌ ಕ್ಷೇತ್ರದಲ್ಲಿ ಶಾಸಕಾರಿಯೂ ಆಯ್ಕೆಯಾಗಿದ್ದರು.

ಸೋಮವಾರ ಮುದ್ದೆಬಿಹಾಳ ತಾಲ್ಲೂಕಿನ ನಾಲತವಾಡದಲ್ಲಿನ ದೇಶ್‌ಮುಖ್‌ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ವಿಮಲಾಬಾಯಿ ದೇಶಮುಖ್ ಅವರು ಜೆ.ಎಚ್.ಪಟೇಲ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.

ಪತಿಯ ನಿಧನದ ನಂತರ 1994ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಗ ಸಚಿವರಾಗಿದ್ದ ಸಿ.ಎಸ್.ನಾಡಗೌಡರನ್ನು ಸೋಲಿಸಿದ್ದರು.

ನಂತರ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಗೆಲುವು ದಾಖಲಿಸಿರಲಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರು.

ಉಳುವವನೇ ಭೂ ಒಡೆಯ ಕಾಯ್ದೆ ಜಾರಿಯಾದಾಗ ಇವರ ಕುಟುಂಬ ಸಾವಿರಾರು ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ದೇಶ್‌ಮುಖ್‌ ಮನೆತನ ಜಿಲ್ಲೆಯಲ್ಲೇ ದೊಡ್ಡ ಕುಟುಂಬ.

ವಿಮಲಾಬಾಯಿ ಅವರ ಪತಿ ಜೆ.ಎಸ್‌. ದೇಶ್‌ಮುಖ್‌ ಅವರು, ಮೂರು ಬಾರಿ ಮುದ್ದೇಬಿಹಾಳ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಶಾಸಕರಾಗಿದ್ದರು. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

‌ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.