ADVERTISEMENT

ಹಳ್ಳಿಗಳಿಗೂ ವಿಶ್ವವಿದ್ಯಾಲಯಗಳು ವಿಸ್ತರಣೆಯಾಗಬೇಕು: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 11:24 IST
Last Updated 22 ಜೂನ್ 2018, 11:24 IST
   

ಬೆಂಗಳೂರು: ನಮ್ಮಲ್ಲಿ ಶೇ 25 ರಷ್ಟು ಮಾತ್ರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಾರೆ,ಹಳ್ಳಿಯ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಹಾಗೂಇಲಾಖೆಯನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಈ ಖಾತೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಪ್ರಾಮಾಣಿಕವಾಗಿ, ಯಶಸ್ವಿಯಾಗಿ ಈ ಖಾತೆ ನಿರ್ವಹಿಸಿ. ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎಂದರು.ಇಲಾಖೆಯಲ್ಲಿ ಬದಲಾವಣೆ, ಮಾರ್ಪಾಡು ಮಾಡಬೇಕಿದೆ. ವಿಶ್ಶವಿದ್ಯಾಲಯಗಳು ನಗರ ಪ್ರದೇಶ ಮಾತ್ರವಲ್ಲದೇ, ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬೇಕು, ವೃತ್ತಿಪರ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಬೇಕು ಎಂದು ಅವರು ಹೇಳಿದರು.

ಇನ್ಪೋಸಿಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತ ವ್ಯವಸ್ಥೆ ತರಬೇಕಿದೆ,ನಾನು ಗ್ರಾಮೀಣ ಪ್ರದೇಶದ ಜೊತೆ ಇರುವ ಖಾತೆ ಬೇಕು ಎಂದು ಬಯಸಿದ್ದು ನಿಜ. ಅಲ್ಲದೆ 8ನೇ ತರಗತಿ ವ್ಯಾಸಂಗ ಮಾಡಿರುವ ಜಿ.ಟಿ. ದೇವೆಗೌಡರು ಉನ್ನತ ಶಿಕ್ಷಣ ಇಲಾಖೆ ನಿರ್ವಹಿಸುತ್ತಾರಾ ಎಂದು ಮಾಧ್ಯಮಗಳು ವರದಿ ಮಾಡಿದ್ದವು ಎಂದು ಜಿ.ಟಿ ದೇವೇಗೌಡ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.