ADVERTISEMENT

ಫ್ಯಾಕ್ಟ್ ಚೆಕ್

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:00 IST
Last Updated 13 ಮೇ 2020, 20:00 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್    

ಕೋವಿಡ್‌–19ರ ವಿರುದ್ಧದ ಹೋರಾಟದಲ್ಲಿ ನಿರ್ಬಂಧಗಳ ಸಡಿಲಿಕೆಗೆ ತಲಾ ಮೂರು ವಾರಗಳ ಐದು ಹಂತದ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದೆ. ಮೊದಲ ಹಂತ ಮೇ 18ರಿಂದ ಆರಂಭವಾಗಲಿದೆ. ಎರಡನೇ ಹಂತ ಜೂನ್‌ 8ರಿಂದ, ಮೂರನೇ ಹಂತ ಜೂನ್‌ 29ರಿಂದ, ನಾಲ್ಕನೇ ಹಂತ ಜುಲೈ 20ರಿಂದ ಹಾಗೂ ಐದನೇ ಹಂತ ಆಗಸ್ಟ್‌ 10ರಿಂದ ಶುರುವಾಗಲಿದೆ. ಈ ಹಂತಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾದರೆ ಪುನಃ ಮೊದಲಿನ ನಿರ್ಬಂಧಗಳು ಶುರುವಾಗಲಿವೆ ಎಂದು ಸರ್ಕಾರ ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಭಾರಿ ಸದ್ದು ಮಾಡಿದೆ.

ಇದು ಸುಳ್ಳು ಸುದ್ದಿ. ಕೇಂದ್ರ ಸರ್ಕಾರ ಇಂತಹ ಯಾವುದೇ ಮಾರ್ಗಸೂಚಿಯನ್ನು ಸಿದ್ಧಪಡಿಸಿಲ್ಲ. ಅದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನೂ ಪ್ರಕಟಿಸಿಲ್ಲ. ವಾಟ್ಸ್‌ ಆ್ಯಪ್‌ನಲ್ಲಿ ಈ ಸಂಬಂಧ ಹರಿದಾಡಿದ ಎಲ್ಲ ಮಾಹಿತಿಯೂ ಆಧಾರರಹಿತವಾಗಿದೆ. ಪಿಐಬಿ ಸಹ ಈ ಮಾಹಿತಿಯನ್ನು ಪರಿಶೀಲಿಸಿದ್ದು, ಸರ್ಕಾರದಿಂದ ಇಂತಹ ಯಾವುದೇ ಮಾರ್ಗಸೂಚಿ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT