ಮಲ್ಲಿಕಾರ್ಜುನ ಖರ್ಗೆ
–ಪಿಟಿಐ ಚಿತ್ರ
ಬೆಂಗಳೂರು: ‘ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಬೇಡ ಜಂಗಮ ಹೆಸರಿನಲ್ಲಿ, ಲಿಂಗಾಯತ ಜಂಗಮರು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ’ ಎಂಬ ಆರೋಪ ಮಾಡಿರುವುದು ಖಂಡನೀಯ’ ಎಂದು ಅಖಿಲ ಕರ್ನಾಟಕ ಡಾ. ಅಂಬೇಡ್ಕರ್ ಬೇಡಜಂಗಮ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕಿ ಎಂ.ಇ. ಸುಜಾತಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಡ ಜಂಗಮಗರಿಗೆ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳಿಗೆ ಜೈಲಿಗೆ ಕಳುಹಿಸಬೇಕು ಎಂಬ ಹೇಳಿಕೆ ಸರಿಯಲ್ಲ. ನಾವು ಬೇಡ ಜಂಗಮರು ಎಂಬುದಕ್ಕೆ ಸರ್ಕಾರಿ ದಾಖಲೆಗಳು, ಕೋರ್ಟ್‌ನ ಆದೇಶಗಳಿವೆ. ನಾವು ಬೇಡ ಜಂಗಮರು ಅಲ್ಲ ಎಂಬುದಕ್ಕೆ ನಿಮ್ಮ ಬಳಿ ಏನಾದರೂ ದಾಖಲೆಗಳಿವೆಯಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.