ADVERTISEMENT

ಕೋವಿಡ್‌: ನಕಲಿ ಪ್ರಮಾಣಪತ್ರ ವಿತರಣೆ –ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 6:02 IST
Last Updated 9 ಜನವರಿ 2022, 6:02 IST

ಬೆಂಗಳೂರು: ಹಣದ ಆಸೆಗೆ ಬಿದ್ದು, ಕೋವಿಡ್‌ ಪರೀಕ್ಷೆಯ ನಕಲಿ ಪ್ರಮಾಣಪತ್ರಗಳನ್ನು ನೀಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಹೊರ ರಾಜ್ಯಗಳಿಗೆ ತರಳಲು ಹಾಗೂ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂಬ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕಾವಲ್‌ಬೈರಸಂದ್ರದ ಸ್ಕೈಲೈನ್‌ ಡಯಾಗ್ನಸ್ಟಿಕ್ಸ್‌ ಹೆಸರಿನಲ್ಲಿ ಆರೋಪಿಗಳು, ‘ಕೋವಿಡ್‌ ಸೋಂಕು ಇಲ್ಲ’ ಎಂಬಂತೆ ಪರೀಕ್ಷಾ ವರದಿಯ ನಕಲಿ ಪ್ರಮಾಣಪತ್ರ ಸಿದ್ಧಪಡಿಸುತ್ತಿದ್ದರು. ಪರಿಚಿತರ ಮೂಲಕ ಅಗತ್ಯವಿರುವವರಿಗೆ ಅವುಗಳನ್ನು ವಿತರಿಸುತ್ತಿದ್ದರು. ಗೂಗಲ್‌ ಪೇ ಹಾಗೂ ನಗದು ರೂಪದಲ್ಲಿ ಹಣ ಪಡೆಯುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಅವರಿಂದ ಕೋವಿಡ್‌ ಪರೀಕ್ಷೆಯ50ಕ್ಕೂ ಹೆಚ್ಚು ನಕಲಿ ಪ್ರಮಾಣಪತ್ರಗಳನ್ನು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಡಿ.ಜೆ.ಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.