ADVERTISEMENT

ನೈರುತ್ಯ ರೈಲ್ವೆ ಎಂಜಿನಿಯರ್ ವಿರುದ್ಧ ಎಫ್‌ಐಆರ್‌

₹2.25 ಕೋಟಿ ಮೌಲ್ಯದ ಆಸ್ತಿ ಅಕ್ರಮ ಸಂಪಾದನೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 20:00 IST
Last Updated 13 ಜನವರಿ 2020, 20:00 IST

ಬೆಂಗಳೂರು: ಕರ್ತವ್ಯದ ಅವಧಿಯಲ್ಲಿ ಆದಾಯ ಮೀರಿ ಸುಮಾರು ₹ 2.25 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ ಆರೋಪದಡಿ ನೈರುತ್ಯ ರೈಲ್ವೆ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ (ನಿರ್ಮಾಣ ವಿಭಾಗ) ಘನಶ್ಯಾಮ್ ಪ್ರಧಾನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಮೈಸೂರು ವಿಶ್ವೇಶ್ವರನಗರದ ನಿವಾಸಿ ಘನಶ್ಯಾಮ್ ವಿರುದ್ಧ ಭ್ರಷ್ಟಚಾರ ತಡೆ ಕಾಯ್ದೆ ಅಡಿ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

1988ರಲ್ಲಿ ಆಗ್ನೇಯ ರೈಲ್ವೆ ವಿಭಾಗದಲ್ಲಿ ಕಾಮಗಾರಿ ನಿರೀಕ್ಷಕರಾಗಿ ಘನಶ್ಯಾಮ್ ಪ್ರಧಾನ್ ನೇಮಕವಾಗಿದ್ದರು. ನಂತರ ಬಡ್ತಿ ಪಡೆದು ವಿವಿಧ ಜಿಲ್ಲೆಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. 2010ರ ಏ. 1ರಿಂದ 2019ರ ಡಿ. 31ರ ಅವಧಿಯಲ್ಲಿ ಮೈಸೂರು, ಹಾಸನ, ದಾವಣಗೆರೆ, ಹಾವೇರಿಯಲ್ಲಿ ರೈಲ್ವೆ ಇಲಾಖೆ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆ ಕಂಪನಿ ಜತೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.