ADVERTISEMENT

ಕದ್ರಾ ಅಣೆಕಟ್ಟೆಯಿಂದ 31 ಸಾವಿರ ಕ್ಯುಸೆಕ್ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:11 IST
Last Updated 4 ಆಗಸ್ಟ್ 2019, 13:11 IST
ಕಾರವಾರ ತಾಲ್ಲೂಕಿನ ಕದ್ರಾ ಅಣೆಕಟ್ಟೆಯಿಂದ ಭಾನುವಾರ ಸಂಜೆ ಕಾಳಿ ನದಿಗೆ ನೀರು ಹರಿಸಲಾಯಿತು
ಕಾರವಾರ ತಾಲ್ಲೂಕಿನ ಕದ್ರಾ ಅಣೆಕಟ್ಟೆಯಿಂದ ಭಾನುವಾರ ಸಂಜೆ ಕಾಳಿ ನದಿಗೆ ನೀರು ಹರಿಸಲಾಯಿತು   

ಕಾರವಾರ: ಜಿಲ್ಲೆಯ ಮಲೆನಾಡಿನಲ್ಲಿಮಳೆ ಮುಂದುವರಿದಿದ್ದುನದಿಗಳುತುಂಬಿಹರಿಯುತ್ತಿವೆ.ಕಾಳಿ ನದಿಗೆ ಕಟ್ಟಲಾಗಿರುವ ಕದ್ರಾ ಅಣೆಕಟ್ಟೆ ಭರ್ತಿಯಾಗಿದ್ದು, ಭಾನುವಾರ ಸಂಜೆ ಒಟ್ಟು 31 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು.

34.50 ಮೀಟರ್ ಎತ್ತರದ (13.74 ಟಿಎಂಸಿ ಅಡಿ) ಅಣೆಕಟ್ಟೆಯಲ್ಲಿ ಭಾನುವಾರ 33.70 ಮೀಟರ್ ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಒಳಹರಿವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾಗಿ ಅಣೆಕಟ್ಟೆಯ ಎಂಟು ಗೇಟ್‌ಗಳ ಪೈಕಿ ಐದರಿಂದ 10 ಸಾವಿರ ಕ್ಯುಸೆಕ್ಹಾಗೂ ವಿದ್ಯುತ್ ಉತ್ಪಾದಿಸಿ 21 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು.ಸಂಜೆ 4 ಗಂಟೆಯ ವೇಳೆಗೆ ಅಣೆಕಟ್ಟೆಯ ಒಳಹರಿವು 46 ಸಾವಿರ ಕ್ಯುಸೆಕ್ ಇತ್ತು.

ಜೊಯಿಡಾ ಭಾಗದಲ್ಲಿ ಕೂಡ ಜೋರಾಗಿ ಮಳೆಯಾಗುತ್ತಿರುವ ಕಾರಣ ಸೂಪಾ ಅಣೆಕಟ್ಟೆಗೂ ಭಾರಿ ಒಳಹರಿವು ಬರುತ್ತಿದೆ. ಶನಿವಾರ ಬೆಳಿಗ್ಗೆ 8ರಿಂದ ಭಾನುವಾರ ಬೆಳಿಗ್ಗೆ 8ರಅವಧಿಯಲ್ಲಿಅಣೆಕಟ್ಟೆಗೆ ಒಂದು ಮೀಟರ್ ನೀರು ಹರಿದು ಬಂದಿದೆ. 564 ಮೀಟರ್ ಎತ್ತರದ ಈ ಅಣೆಕಟ್ಟೆ ಭರ್ತಿಯಾಗಲು ಇನ್ನೂ 15.4 ಮೀಟರ್ ನೀರು ಸಂಗ್ರಹವಾಗಬೇಕಿದೆ.

ADVERTISEMENT

ಉಳಿದಂತೆ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳಲ್ಲಿ ದಿನವಿಡೀಬಿರುಸಾದಮಳೆ ಸುರಿಯಿತು.ಕರಾವಳಿಯಲ್ಲಿ ಆಗಾಗ ರಭಸದ ಗಾಳಿಯೂ ಜೊತೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.