ADVERTISEMENT

ಮೂಡಿಗೆರೆ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶ: ಎಂ.ಪಿ. ಕುಮಾರಸ್ವಾಮಿ ಧರಣಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 8:18 IST
Last Updated 12 ಆಗಸ್ಟ್ 2021, 8:18 IST
   

ಬೆಂಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರವನ್ನು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಎಂದುಘೋಷಣೆ ಮಾಡದಿರುವ ಬಗ್ಗೆಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ತಮ್ಮನ್ನು ಮನವೊಲಿಸಿ ಕರೆದುಕೊಂಡು ಹೋಗಲು ಬಂದ ಕಂದಾಯ ಸಚಿವ ಆರ್.ಅಶೋಕ ಅವರ ಮುಂದೆ ಕುಮಾರಸ್ವಾಮಿ ಕಣ್ಣೀರು ಹಾಕಿದರು.

ನನಗೆ ಸಚಿವ ಸ್ಥಾನ ನೀಡದಾಗಲೂ ಕಣ್ಣೀರು ಹಾಕಿಲ್ಲ. ಕ್ಷೇತ್ರವನ್ನು ಅತಿವೃಷ್ಟಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶವೆಂದು ಘೋಷಿಸಿಲ್ಲ. ಶೃಂಗೇರಿ ಕ್ಷೇತ್ರ ಸೇರಿಸಿ ಮೂಡಿಗೆರೆ ಬಿಟ್ಟಿರುವುದು, ಅನ್ಯಾಯ ಎಂದು ಹೇಳಿದರು.

ADVERTISEMENT

ಕುಮಾರಸ್ವಾಮಿ ಜತೆ ಮಾತನಾಡಿ ಅನ್ಯಾಯ ಸರಿಪಡಿಸುವುದಾಗಿ ಅಶೋಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.