ADVERTISEMENT

ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿಗಳು

ಕಂಪ್ಲಿ–ಗಂಗಾವತಿ ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 11:36 IST
Last Updated 22 ಅಕ್ಟೋಬರ್ 2019, 11:36 IST
ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮಂಗಳವಾರ ನೀರಿನಲ್ಲಿ ಮುಳುಗಡೆಯಾಗಿದೆ
ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮಂಗಳವಾರ ನೀರಿನಲ್ಲಿ ಮುಳುಗಡೆಯಾಗಿದೆ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ 1,75,000 ಕ್ಯುಸೆಕ್‌ ಕ್ಯುಸೆಕ್‌ ನೀರು ಬಿಟ್ಟಿರುವುದರಿಂದ ಸಿರುಗುಪ್ಪ ತಾಲ್ಲೂಕಿನ ಬಾಗೇವಾಡಿಯ ಉಪ್ಪಳ ಗಡ್ಡೆಯಲ್ಲಿ ಆರು ಕುರಿಗಾಹಿಗಳು, 600 ಕುರಿಗಳು ಸಿಲುಕಿಕೊಂಡಿವೆ.

ವಾರದ ಹಿಂದೆ ಕುರಿಗಾಹಿಗಳು ಕುರಿ ಮೇಯಿಸಲು ಅಲ್ಲಿಗೆ ಹೋಗಿದ್ದರು. ಈಗ ನದಿ ಉಕ್ಕಿ ಹರಿಯುತ್ತಿರುವ ಕಾರಣ ಉಪ್ಪಳಗಡ್ಡೆ ನಡುಗಡ್ಡೆಯಾಗಿ ಬದಲಾಗಿದೆ. ಕುರಿಗಾಹಿಗಳನ್ನು ಸುರಕ್ಷಿತವಾಗಿ ಕರೆತರಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

ಇನ್ನೊಂದೆಡೆ ಕಂಪ್ಲಿ–ಗಂಗಾವತಿ ಸೇತುವೆ ಮುಳುಗಿದ್ದು, ಬೀದರ್‌, ಕಲಬುರ್ಗಿ, ರಾಯಚೂರು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅನೇಕ ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ. ತಾಲ್ಲೂಕಿನ ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲು ಸೇತುವೆ, ಚಕ್ರತೀರ್ಥ ಇನ್ನೂ ನೀರಿನಲ್ಲೇ ಇವೆ.
ಭಾರಿ ಮಳೆಗೆ ಹೂವಿನಹಡಗಲಿ ತಾಲ್ಲೂಕಿನಲ್ಲಿ 67 ಮನೆಗಳು ಕುಸಿದಿವೆ. ನೂರಾರು ಎಕರೆ ಮೆಕ್ಕೆಜೋಳ ಹಾಳಾಗಿದೆ. ತಾಲ್ಲೂಕಿನ ಬೂದನೂರು ಕೆರೆ ಒಡೆದು ಹೋಗಿದೆ.

ADVERTISEMENT

ತುಂಗಭದ್ರಾ ಜಲಾಶಯದಿಂದ 1,75,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 1,55,431 ಕ್ಯುಸೆಕ್‌ ಒಳಹರಿವು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.